Site icon PowerTV

ಪರೇಸ್ ಮೆಸ್ತಾ ಕೊಲೆ ಆರೋಪಿ ವಕ್ಫ ಮಂಡಳಿಗೆ: ತಾತ್ಕಾಲಿಕ ಆದೇಶ ತಡೆ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಪರೇಸ್ ಮೆಸ್ತಾ ಕೊಲೆ ಆರೋಪಿಗೆ ವಕ್ಫ ಮಂಡಳಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ ವಿಚಾರ ನೇಮಕಾತಿ ಆದೇಶವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ.

2017ರಲ್ಲಿ ಪರೇಶ್ ಮೆಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿ ಆಜಾದ್ ಅಣ್ಣಿಗೇರಿ ಅವರ ಹೆಸರು ಕೇಳಿ ಬಂದಿತ್ತು. ಇದೀಗ ವಕ್ಫ ಮಂಡಳಿ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನ ರಾಜ್ಯ ಸರ್ಕಾರ ನೀಡಿತ್ತು.

ರಾಜ್ಯ ಸರ್ಕಾರ ಆದೇಶಕ್ಕೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಷಯ ಭುಗಿಲೆದ್ದ ಹಿನ್ನೆಲೆಯಲ್ಲಿ ಧಿಡೀರನೇ ಆದೇಶವನ್ನ ರಾಜ್ಯ ಸರ್ಕಾರ ತಡೆ ಹಿಡಿದಿದೆ.

Exit mobile version