Site icon PowerTV

ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಮೇಲೆ ಗರಂ ಆದ ಸಚಿವ ಮಾಧುಸ್ವಾಮಿ

ಬೆಂಗಳೂರು: ಆಗಸ್ಟ್​ 15 ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಬದಲಾವಣೆಯಾಗುತ್ತದೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ ಹೇಳಿಕೆ ವಿಚಾರವಾಗಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿದ್ದಾರೆ.

ಯಾರ್ರೀ ಸುರೇಶ್ ಗೌಡ, ಸಿಎಂ ಬದಲಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರಾ ಇಲ್ವಲ್ಲ. ಅಥವಾ ಪಕ್ಷದ ಅಧ್ಯಕ್ಷರು ಹೇಳಿದ್ದಾರಾ. ಒಬ್ಬ ಮಾಜಿ ಎಂಎಲ್ ಎ ಹೇಳಿದ್ರೆ ಸಿಎಂ ಬದಲಾಗ್ತಿರೇನ್ರಿ ಎಂದು ಮಾಜಿ ಶಾಸಕ ಸುರೇಶ್ ಗೌಡ ಮೇಲೆ ಗರಂ ಆಗಿದ್ದಾರೆ.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬದಲಾವಣೆ ಮಾಡುವಂತ ವ್ಯಕ್ತಿ ಹೇಳಿದಿದ್ರೆ ನಾನು ರಿಯಾಕ್ಟ್ ಮಾಡುತ್ತಿದ್ದೆ. Who is he ಸುರೇಶ್ ಗೌಡ ಎಂದು ಸುರೇಶ್ ಗೌಡನ ಮೇಲೆ ಸಚಿವ ಮಾಧುಸ್ವಾಮಿ ಫುಲ್ ಗರಂ ಆಗಿ ಹೇಳಿಕೆ ನೀಡಿದ್ದಾರೆ.

Exit mobile version