Site icon PowerTV

ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ.. ಎರಡಲ್ಲ. ಮೂರು ಚಿರತೆ ಪತ್ತೆ

ಬೆಳಗಾವಿ : ಅರಣ್ಯ ‌ಸಚಿವ ಉಮೇಶ ಕತ್ತಿ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗಿದ್ದು, ಧರ್ಮಟ್ಟಿ ಗ್ರಾಮದ 1 ಕಿಮೀ ವ್ಯಾಪ್ತಿಯ ಮೂರು ಶಾಲೆಗಳಿಗೂ ರಜೆ ಘೋಷಿಸಲಾಗಿದೆ.

ನಗರದಲ್ಲಿ ಒಂದಲ್ಲ ಎರಡಲ್ಲ. ಮೂರು ಚಿರತೆ ಹಾವಳಿ ಜಾಸ್ತಿಯಾಗಿದ್ದು, ಸತತ 4ನೇ ದಿನವೂ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿರತೆ ಚಲನವಲನ ಕಂಡು ಹಿಡಿಯಲು ಡ್ರೋನ್ ಕ್ಯಾಮರಾ ‌ಮೊರೆ ಹೋಗಿದ್ದು, ಮೂರು ಕಡೆಗಳಲ್ಲಿ ಡ್ರೋನ್ ಹಾರಿಸಿದ್ರು ಚಿರತೆ ಸೆರೆಯಾಗಲಿಲ್ಲ.

ಇನ್ನು, ಚಿಕ್ಕೋಡಿ ತಾಲೂಕಿನ ಯಡೂರವಾಡಿ ಬಳಿಯೂ ಪ್ರತ್ಯಕ್ಷವಾಗಿದ್ದ ಚಿರತೆ. ಕಳೆದ ಹದಿನೈದು ದಿನಗಳಿಂದ ಕಾರ್ಯಾಚರಣೆ ನಡೆಸಿದರೂ ಯಡೂರವಾಡಿಯಲ್ಲಿ ಪತ್ತೆಯಾಗಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿರುವ ಮೂರು ಚಿರತೆಗಳು. ಚಿರತೆ ಸೆರೆ ಸಿಗದ ಹಿನ್ನೆಲೆ ಚಿರತೆ ಪ್ರತ್ಯಕ್ಷವಾದ ಸ್ಥಳಗಳಲ್ಲಿ ಸಾರ್ವಜನಿಕರ ಆತಂಕ ಇನ್ನು ಹೆಚ್ಚಾಗಿದೆ. ಡ್ರೋನ್ ಬಳಸಿ ಚಿರತೆಯ ಚಲನವಲನ ಸೆರೆಹಿಡಿಯಲು ಯತ್ನಿಸುತ್ತಿದೆ.

Exit mobile version