ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೋರ್ವ ಬಾಲಕ ಬಲಿ..!

ಬೆಂಗಳೂರು : ಸಿಲಿಕಾನ್​ ಸಿಟಿ ರಸ್ತೆ ಗುಂಡಿಗೆ ಮತ್ತೋರ್ವ ಬಾಲಕ ಬಲಿಯಾದ ಘಟನೆ ಕೆ.ಆರ್.ಪುರದ ಹೊಸಕೋಟೆ ರಸ್ತೆಯಲ್ಲಿ ನಡೆದಿದೆ.

ನಗರದ ವಾಹನ ಸವಾರರೇ ಎಚ್ಚರ.. ಎಚ್ಚರ..! ಬಲಿಗಾಗಿ ಡೆಡ್ಲಿ ಗುಂಡಿಗಳು ಬಾಯ್ತೆರೆದು ಕಾಯ್ತಿವೆ . ಕೆ.ಆರ್.ಪುರದ ಹೊಸಕೋಟೆ ರಸ್ತೆಯಲ್ಲಿ ಆಯ ತಪ್ಪಿ ಬೈಕ್ ವಾಲಿದಾಗ ಕೆಳಗೆ ಬಿದ್ದ ಬಾಲಕ ಜೀವನ್ ಇದೇ ವೇಳೆ ಪಕ್ಕದಲ್ಲೇ ಹೋಗ್ತಿದ್ದ ವಾಹನ ಹರಿದು ಬಾಲಕ ಸಾವನ್ನಪ್ಪಿದ್ದಾನೆ.

ಅದಲ್ಲದೇ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಮಗ ಜೀವನ್, ಸ್ಥಳಕ್ಕೆ ಕೆ.ಆರ್.ಪುರ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಹಳೆ ಮದ್ರಾಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸದ್ಯ ಬಾಲಕನ ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

Related Articles

TRENDING ARTICLES