Site icon PowerTV

ನ್ಯೂಯಾರ್ಕ್​ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ.!

ನವದೆಹಲಿ: ನ್ಯೂಯಾರ್ಕ್​ನಲ್ಲಿ ಕಾರ್ಯಕ್ರಮಯೊಂದರಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ.

ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಅವರು ನ್ಯೂಯಾರ್ಕ್​ನ ಚೌಟಕ್ವಾ ಇನ್‌ಸ್ಟಿಟ್ಯೂಷನ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಓಡೋಡಿ ಶಂಕಿತನೊಬ್ಬ ಬಂದು ವೇದಿಕೆಯ ಮೇಲಿದ್ದ ರಶೀದ್ ಅವರ ಮೇಲೆ ಚಾಕುವಿನಿಂದ 10 ರಿಂದ 15 ಬಾರಿ ಹಲ್ಲೆ ನಡೆಸಿದ್ದಾನೆ.

75 ವರ್ಷ ವಯಸ್ಸಿನ ಲೇಖಕ ರಶ್ದಿ ಅವರ ಕುತ್ತಿಗೆಗೆ ಭಾಗಗಕ್ಕೆ ಬಲವಾದ ಹಲ್ಲೆಯಾಗಿದೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ. ಲೇಖಕರನ್ನು ಹೆಲಿಕಾಪ್ಟರ್ ಮೂಲಕ ಸದ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಇರಾನ್‌ನಿಂದ ರಶ್ದಿ ಅವರಿಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿದ್ದವು.

Exit mobile version