Site icon PowerTV

‘ಅರುಂದತಿ’ ಸಿನಿಮಾ ನೋಡಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕ.!

ತುಮಕೂರು: ತೆಲುಗಿನ ಅರುಂದತಿ ಸಿನಿಮಾ ನೋಡಿ ಪ್ರಭಾವಿತನಾದ ಯುವಕನೊಬ್ಬ ಸಿನಿಮಾ ಶೈಲಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ ಸಾವು ಕಂಡ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗಿಡ್ಡಯ್ಯನ ಪಾಳ್ಯದಲ್ಲಿ ನಡೆದಿದೆ.

ಗಿಡ್ಡಯ್ಯನಪಾಳ್ಯದ ಯುವಕ ರೇಣುಕ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಸಿದ್ದಪ್ಪ ಎಂಬುವವರ ಮಗನಾಗಿರುವ ರೇಣುಕಾ ತುಮಕೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ, ಸಿನಿಮಾ ಬಗ್ಗೆ ವಿಪರೀತ ಗೀಳು ಹಚ್ಚಿಕೊಂಡಿದ್ದ ಈತ ಕಾಲೇಜಿನಿಂದ ಮನೆಗೆ ಬಂದು ಅರುಂದತಿ ಸಿನಿಮಾ ವೀಕ್ಷಸಿದ್ದಾನೆ. ಬಳಿಕ ಪುರವರಕ್ಕೆ ತೆರಳಿ ಪೆಟ್ರೋಲ್ ತಂದು ತಮ್ಮದೇ ರೇಷ್ಮೆ ತೋಟಕ್ಕೆ ತೆರಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಬೆಂಕಿಹಚ್ಚಿಕೊಂಡಿದನ್ನು ನೋಡಿದ ಪೋಷಕರು ಓಡಿ ಬಂದು ಬೆಂಕಿನಂದಿಸಿ ಮಗನ ಪ್ರಾಣ ರಕ್ಷಿಣೆಗೆ ಹರಸಾಹಸ ಪಟ್ಟಿದ್ದು ‘ನನಗೆ ಮುಕ್ತಿ ಬೇಕು ಮುಕ್ತಿ ಬೇಕು’ ಎಂದು ಯುವಕ ಸಿನಿಮಾ ಗೀಳಿನಲ್ಲಿ ಬಡಬಡಿಸಿದ್ದಾನೆ.

ತಕ್ಷಣ ಯುವಕ ರೇಣುಕಾನಿಗೆ ಮಧುಗಿರಿ ಹಾಗೂ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ರೇಣುಕಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Exit mobile version