Site icon PowerTV

ಎಸಿಬಿ ರದ್ದು, ಹೈಕೋರ್ಟ್ ಆದೇಶ ಸ್ವಾಗತಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಇಂದು ಹೈಕೋರ್ಟ್​ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರದ್ದು ಪಡಿಸಿದ ಹಿನ್ನಲೆಯಲ್ಲಿ ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ತೀರ್ಮಾನ ಗೌರವಿಸುತ್ತೇನೆ. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆಯಾಗಿತ್ತು. ಬೇರೆ ರಾಜ್ಯದಲ್ಲಿ ಎಸಿಬಿ ಇತ್ತು. ನಮ್ಮ ರಾಜ್ಯದಲ್ಲಿ ಮಾತ್ರ ಎಸಿಬಿ ಇರಲಿಲ್ಲ. ಪೂರ್ಣ ಪ್ರಮಾಣದ ಆದೇಶ ನೋಡಿದ ಮೇಲೆ ಮತ್ತೆ ಪ್ರತಿಕ್ರಿಯಿಸುವೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

2016 ಕಾಂಗ್ರೆಸ್ ಸರ್ಕಾರವಾದ ಸಿದ್ದರಾಮಯ್ಯ ಅವರು ಎಸಿಬಿಯ (ಭ್ರಷ್ಟಾಚಾರ ನಿಗ್ರಹ ದಳ)ಯನ್ನ ಸ್ಥಾಪನೆ ಮಾಡಿದ್ದರು. ಈ ಆದೇಶವನ್ನ ಕರ್ನಾಟಕ ಹೈಕೋರ್ಟ್ ಇಂದು​ ರದ್ದು ಮಾಡಿ, ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶಿಸಿರುವುದನ್ನ ಕಾಣಬಹುದು.

Exit mobile version