Site icon PowerTV

ಬಿಜೆಪಿಯವರಿಗೆ ರಾಷ್ಟ್ರ ಧ್ವಜದ ಬಗ್ಗೆ ಗೌರವವೇ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು : ತ್ರಿವರ್ಣ ಧ್ವಜಕ್ಕೆ ಗೌರವ ಕೊಡದವರು ಈಗ ಮನೆ ಮನೆಯಲ್ಲಿ ಹಾರಿಸ್ತೀವಿ ಅಂದ್ರೆ ಜನ ನಂಬ್ತಾರಾ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಷ್ಟ್ರ ಧ್ವಜದ ಬಗ್ಗೆ ಗೌರವವೇ ಇಲ್ವಲ್ಲ. ಬರೀ ನಾಟಕ ಆಡ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ನಾನಂತೂ ಟ್ವೀಟ್ ಮಾಡಿಲ್ಲ ಎಂದರು.

ಇನ್ನು, ಸುರೇಶ್ ಗೌಡ ಯಾವ ಪಾರ್ಟಿಯವರ್ರೀ ? ಸುರೇಶ್ ಗೌಡ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ, ಕಾಂಗ್ರೆಸ್ ಅವರ ಹೇಳಿಕೆ ಪಿಕ್ ಮಾಡ್ತೋ ಏನಾದರೂ ಆಗಲಿ. ಪಿಕ್ ಮಾಡಿದಿವಿ ಅಂತಲೇ ಅಂದುಕೊಳ್ಳೋಣ, ಆರ್ಡಿನರಿ ವ್ಯಕ್ತಿ ಹೇಳಿದರೆ ಪರವಾಗಿಲ್ಲ ಎಂದು ಹೇಳಿದರು.

ಅದಲ್ಲದೇ, ಯತ್ನಾಳ್ ಕೂಡ ಹಿಂದೆ ಹೇಳಿದ್ರಲ್ಲ ಸಿಎಂ ಬದಲಾಗ್ತಾರೆ ಅಂತ, ತುಮಕೂರು ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ ಹೇಳ್ತಾನೆ ಅಂದ್ರೆ ಏನರ್ಥ, ಕಟೀಲ್ ಬದಲಾವಣೆಯಲ್ಲೂ ಗೊಂದಲ ಮೂಡಿರುವ ವಿಚಾರಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಇನ್ನು, ಕಟೀಲ್ ಅವಧಿ ಡಿಸೆಂಬರ್​​ಗೇನೋ ಮುಗಿಯುತ್ತದೆ. ಅವರು ಏನಾದರೂ ಮಾಡಿಕೊಳ್ಳಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಕಟೀಲ್ ಇದ್ರೂ ಅಷ್ಟೇ ಇನ್ನೊಬ್ಬರೂ ಇದ್ರೂ ಅಷ್ಟೇ ಬಿಜೆಪಿ ಖಚಿತವಾಗಿ ಸೋಲುತ್ತದೆ ಎಂದರು.

Exit mobile version