Site icon PowerTV

ಎಸಿಬಿ ರದ್ದು, ಹೈಕೋರ್ಟ್ ಅದೇಶ ಸಂತಸ ತಂದಿದೆ: ನಿವೃತ್ತ ನ್ಯಾ ಸಂತೋಷ್ ಹೆಗ್ಡೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ರದ್ದು ಗೊಳಿಸಿದ ಬಗ್ಗೆ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ ಮಾತನಾಡಿದ್ದಾರೆ.

ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ರದ್ದು ಗೊಳಿಸಿ, ಇದನ್ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿರುವ ಹೈಕೋರ್ಟ್ ಅದೇಶ ನನಗೆ ಬಹಳ ಸಂತಸ ತಂದಿದೆ. ಹೈಕೋರ್ಟ್​ ಈ ವಿಚಾರದಲ್ಲಿ ಉತ್ತಮವಾದ ನಿರ್ಧಾರ ತೆಗೆದುಕೊಂಡಿದೆ. ಅದರೆ ಲೋಕಾಯುಕ್ತಕ್ಕೆ ಅಧಿಕಾರವನ್ನು ನೀಡಬೇಕು. ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ.

ಲೋಕಾಯುಕ್ತಕ್ಕೆ ಅಧಿಕಾರಿಗಳ ನೇಮಕದಲ್ಲಿ ರಾಜ್ಯ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಬಾರದು. ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಲೋಕಾಯುಕ್ತಕ್ಕೆ ಕೆವಲ ಅಧಿಕಾರ ನೀಡೋದಲ್ಲ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಬೇಕು ಎಂದು ನ್ಯಾ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಲೋಕಾಯುಕ್ತರು ಕೊಟ್ಟ ಜವಾಬ್ದಾರಿ ಚನ್ನಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರ ಸೌಲಭ್ಯವನ್ನು ಕೂಟ್ಟ ನಂತರ ಉತ್ತಮವಾಗಿ ನಿರ್ವಹಿಸಬೇಕು. ಇಲ್ಲವಾದ್ರೇ ಜನರು ಜತೆ ಸೇರಿ ನಾನು ವಿರೋಧ ಮಾಡುತ್ತೇನೆ ಎಂದಿದ್ದಾರೆ.

Exit mobile version