Site icon PowerTV

ಲೈಫ್​ನಲ್ಲಿ ಹುಚ್ಚು ಆತ್ಮ ವಿಶ್ವಾಸವಿರಲಿ, ಆಗ ಗೆಲುವು ಸಾಧ್ಯ – ರಾಕಿ ಭಾಯ್​ ಯಶ್​

ಮೈಸೂರು: ನಮ್ಮೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸವಾಗಿದೆ ಎಂದು ರಾಕಿಂಗ್​ ಸ್ಟಾರ್​ ಯಶ್​ ಮಾತನಾಡಿದ್ದಾರೆ.

ಇಂದು ಮೈಸೂರು ವಿಶ್ವವಿದ್ಯಾಲಯ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಡಿ ಹಮ್ಮಿಕೊಂಡ ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್​, ನಗರದ ಒಂಟಿಕೊಪ್ಪಲು, ಪಡುವಾರಹಳ್ಳಿ, ಗಂಗೋತ್ರಿಯಲ್ಲಿ ಸುತ್ತಾಡ್ತಾ ಇದ್ದೆ. ತಂದೆ- ತಾಯಿಗೆ ನಾನು ಆವಾಗ ಒಳ್ಳೆ ಮಗನಾಗಿರಲಿಲ್ಲ. ಬದುಕಿನ ಬದಲಾವಣೆಗೆ ದೊಡ್ಡದೇನು ಬೇಕಾಗಿಲ್ಲ ಆತ್ಮ ವಿಶ್ವಾಸ ಇದ್ದರೆ ಗೆಲುವು ಸಾಧ್ಯ ಎಂದರು.

ಲೈಫ್​ನಲ್ಲಿ ಹುಚ್ಚು ಆತ್ಮ ವಿಶ್ವಾಸ ಇರಬೇಕು. ಯಾರಾದರೂ ಊಹೆ ಮಾಡಿದ್ರಾ? ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಾ ಅಂತ
ನೀವು ಒಳ್ಳೆಯದು ಮಾತಾಡ್ತಾ, ಯೋಚನೆ ‌ಮಾಡ್ತಾ ಹೋಗಿ ಆಗ ತಂತಾನೆ ಅದು‌ ಒಳ್ಳೆಯದಾಗುತ್ತದೆ.

ಪ್ರತಿಯೊಬ್ಬ ತನ್ನ ವೃತ್ತಿಯಲ್ಲಿ ಕಷ್ಟಪಟ್ಟು ಮುಂದೆ ಬರುವ ಮೂಲಕ‌ದೇಶದ ಪ್ರಗತಿ ಸಾಧಿಸಬಹುದು. ಹಳ್ಳಿಯ ಮೂಲೆಯಿಂದ ಬೆಳೆಯಬಹುದು. ನಿಮ್ಮಲ್ಲಿ ಸಾಧಿಸುವ ಚಲ ಇದ್ದರೆ ಗೆಲುವು ಸಾಧ್ಯ. ಸಿಎಂ ಈ ಕ್ಷೇತ್ರದ ಬಗ್ಗೆ ಹಲವು ಕನಸು ಹೊಂದಿದ್ದಾರೆ. ಅವರ ಕನಸುಗಳೆಲ್ಲ ಈಡೇರಲಿ ಎಂದು ಆಶಿಸುವೆ ಎಂದು ಯಶ್​ ಹೇಳಿದ್ದಾರೆ.

Exit mobile version