Site icon PowerTV

ರಾಖಿ ಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್​

ದೇಶಾದ್ಯಂತ ಇಂದು ಸಂಭ್ರಮ ಸಡಗರದಿಂದ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಯಶ್ ಕೂಡ ಪ್ರತೀ ವರ್ಷದಂತೆ ಇಂದೂ ಕೂಡ ರಕ್ಷಬಂಧನ ಆಚರಿಸಿದ್ದಾರೆ.

ಅದೆಷ್ಟು ಬಿಝಿ ಇದ್ದರೂ, ರಾಖಿ ಹಬ್ಬದಂದು ತನ್ನ ತಂಗಿಯ ಮುಂದೆ ಹಾಜರಿರುತ್ತಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಕೂಡ ರಕ್ಷಾ ಬಂಧನ ದಿನದಂದು ಸಹೋದರಿ ನಂದಿನಿ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವುದು. ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಪ್ರವಾಸದಲ್ಲಿದ್ದ ರಾಕಿ ಭಾಯ್ ರಾಖಿ ಹಬ್ಬದ ವೇಳೆಗೆ ಮನೆಗೆ ಹಿಂತಿರುಗಿದ್ದಾರೆ. ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Exit mobile version