Site icon PowerTV

ಸ್ವಾತಂತ್ರ್ಯಕ್ಕೂ ಮುಂಚೆ ‘ಕಾಂಗ್ರೆಸ್​’ ರಾಜಕೀಯ ಪಕ್ಷವೇ ಅಲ್ಲ : ಡಾ.ಕೆ.ಸುಧಾಕರ್

ಬೆಂಗಳೂರು : ಸ್ವಾತಂತ್ರ್ಯಕ್ಕೂ ಮುಂಚೆ ಕಾಂಗ್ರೆಸ್ ಪಕ್ಷ ರಾಜಕೀಯ ಪಕ್ಷವೇ ಅಲ್ಲ. ಕಾಂಗ್ರೆಸ್​ ಪಕ್ಷ ರಾಜಕೀಯೇತರ ಪಕ್ಷವಾಗಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸ್ವಾತಂತ್ರ್ಯ ಸಿಕ್ಕ ತಕ್ಷಣ ಗಾಂಧಿಜೀಯವರು ಕಾಂಗ್ರೆಸ್​ ತ್ಯಜಿಸಲು ಹೇಳಿದ್ದರು. ಆದರೆ ಕಾಂಗ್ರೆಸ್​​ ಬಳುವಳಿಯನ್ನೇ ಬಳಸಿಕೊಂಡು ಪೋಸ್ ನೀಡುತ್ತಿದ್ದಾರೆ ಎಂದರು.

ಇನ್ನು, ಈಗಿನ ಕಾಂಗ್ರೆಸ್ಸಿಗರು ತಾವೇ ಸ್ವಾತಂತ್ರ್ಯ ಹೋರಾಟಗಾರರ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ. ವೀಪಕ್ಷ ನಾಯಕ ಸಿದ್ದರಾಮಯ್ಯ ವೀರ್​ಸಾವರ್ಕರ್​ರವರ ಇತಿಹಾಸವನ್ನು ತಿಳಿದುಕೊಳ್ಳಲಿ. ಬಿಜೆಪಿ, ಆರ್.ಎಸ್.ಎಸ್ ವಿರುದ್ದ ಮಾತನಾಡುವ ಮುನ್ನ ಇತಿಹಾಸ ತಿಳಿದುಕೊಳ್ಳಲಿ. ವೀರ ಸಾವರ್ಕರ್ ಬಗ್ಗೆ ಮಾತನಾಡುವ ನೈತಿಕತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಇಲ್ಲ. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಹೊಗಳು ಭಟ್ಟರಾಗಿರುವುದು ದುರದೃಷ್ಟಕರ ಎಂದು ಹೇಳಿಕೆ ನೀಡಿದರು.

Exit mobile version