Site icon PowerTV

ಸಿಎಂ ಬದಲಾವಣೆ, ದಿನಕ್ಕೆ 2 ತಾಸು ಹೆಚ್ಚು ಕೆಲಸ ಮಾಡುವೆ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಈ ಕುರಿತು ಟ್ವೀಟ್ ಮಾಡ್ತಿರೋದು ಕಾಂಗ್ರೆಸ್ ಇದು ಮೊದಲನೆ ಸಲವಲ್ಲ. ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿದೆ. ಜನ ಯಾರು ಕೂಡ ಇಂತಹ ಊಹಾಪೋಹ ನಂಬೋದಿಲ್ಲ ಎಂದಿದ್ದಾರೆ.

ನಾನು ಸ್ಥಿತ ಪ್ರಜ್ಞಾನಾಗಿದ್ದೇನೆ. ಇವರ ಮಾತುಗಳಿಗೆ ಆಧಾರವಿಲ್ಲ. ಇದರಿಂದ ನನ್ನ ನಿರ್ಣಯಗಳು ಇನ್ನಷ್ಟು ಗಟ್ಟಿಯಾಗುತ್ತದೆ. ಇದರಿಂದ ಮತ್ತಷ್ಟು ದಿನಕ್ಕೆ 2 ತಾಸು ಕಾಲ ಹೆಚ್ಚು ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಮತ್ತು ಜನರ ಬಳಿ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಿಎಂ ಸ್ಥಾನದ ರಾಜೀನಾಮೆ ಕುರಿತು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Exit mobile version