Site icon PowerTV

ಬೆಂಗಳೂರಿನ 10 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಧ್ವಜಾರೋಹಣ ಮಾಡಲು ಬಿಬಿಎಂಪಿ ಚಿಂತನೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ 10 ಲಕ್ಷಕ್ಕೂ ಹೆಚ್ಚು ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ವು ಧ್ವಜಗಳ ಮಾರಾಟಕ್ಕೆ ವಲಯವಾರು ಪ್ರಮುಖ ಸ್ಥಳಗಳನ್ನ ನಿಗದಿ ಪಡಿಸಿದೆ. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ನಾಗರಿಕರಿಗೆ ಧ್ವಜಗಳ ಮಾರಾಟ ಮಾಡುವ ಜವಾಬ್ದಾರಿಯನ್ನ ಬಿಬಿಎಂಪಿ ನೀಡಲು ನಿರ್ಧರಿಸಿದೆ.

1. ಪಶ್ಚಿಮ ವಲಯ:
• ಮಂತ್ರಿ ಮಾಲ್
• ಒರಾಯನ್ ಮಾಲ್
• ಲುಲು ಮಾಲ್(ಗ್ಲೋಬಲ್ ಮಾಲ್)
• ಗೋಪಾಲನ್ ಮಾಲ್

2. ಪೂರ್ವ ವಲಯ:
• ಗರುಡ ಮಾಲ್
• ಸೆಂಟ್ರಲ್ ಮಾಲ್
• 1 ಎಂ.ಜಿ ಮಾಲ್
• ಎಂ.ಎಸ್ ಬಿಲ್ಡಿಂಗ್

3. ದಕ್ಷಿಣ ವಲಯ:
• ಲೈಫ್ ಸ್ಟೈಲ್ ಮಾಲ್
• ಜಿಟಿ ವರ್ಲ್ಡ್ ಮಾಲ್
• ಸ್ವಾಗತ್ ಗರುಡ ಮಾಲ್
• ಫೋರಂ ಮಾಲ್
• ಮೋರ್ ಮಾರ್ಟ್, ಬುಲ್ ಟೆಂಪಲ್ ರಸ್ತೆ
• ಗೋಪಾಲನ್ ಮಾಲ್
• ಸೆಂಟ್ರಲ್ ಮಾಲ್

4. ಮಹದೇವಪುರ ವಲಯ:
•  ಫಿನೀಕ್ಸ್ ಮಾಲ್
• ಫೋರಂ ಮಾಲ್, ವೈಟ್ ಫೀಲ್ಡ್
• ಶಾಂತಿನಿಕೇತನ್ ಫೋರಮ್ ಮಾಲ್
• ಮೋರ್ ಮಾರ್ಕೆಟ್, ಮಾರತಹಳ್ಳಿ
• ಟೋಟಲ್ ಮಾಲ್, ಬೆಳಂದೂರು
• ಸೆಂಟ್ರಲ್ ಮಾಲ್, ಬೆಳಂದೂರು
• ಕೆ.ಎಲ್.ಎಂ ಮಾಲ್, ಮಾರತಹಳ್ಳಿ
• ಮಲ್ಟಿಪ್ಲೇಕ್ಸ್, ಮಾರತಹಳ್ಳಿ
• ಬ್ರ್ಯಾಂಡ್ ಫ್ಯಾಕ್ಟರಿ, ಮಾರತಹಳ್ಳಿ
• ಡಿ ಮಾರ್ಟ್, ಸಿದ್ದಾಪುರ
• ಹೈಪರ್ ಸಿಟಿ ಮಾಲ್, ತೂಬರ ಹಳ್ಳಿ
• ಬ್ರೂಕ್ ಫೀಲ್ಡ್ ಮಾಲ್, ಕುಂದರಹಳ್ಳಿ
• ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ

5. ಯಲಹಂಕ ವಲಯ:
• ಆರ್.ಎಂ.ಝಡ್ ಮಾಲ್, ಯಲಹಂಕ.
• ಎಸ್ಟಿಮ್ ಮಾಲ್
• ಎಲಿಮಂಟ್ಸ್ ಮಾಲ್,

6. ರಾಜರಾಜೇಶ್ವರಿನಗರ ವಲಯ:
• ಜೆ.ಪಿ ಪಾರ್ಕ್
• ಗೋಪಾಲನ್ ಆರ್ಕೇಡ್
• ರಾಯಲ್ ಮಾರ್ಟ್

7. ಬೊಮ್ಮನಹಳ್ಳಿ ವಲಯ:
• ರಾಯಲ್ ಮಿನಾಕ್ಷಿ ಮಾಲ್
• ವೆಗಾಸಿಟಿ ಮಾಲ್
• ರಿಲಯನ್ಸ್ ಮಾರ್ಟ್

8. ದಾಸರಹಳ್ಳಿ ವಲಯ:
• ಐಕಿಯಾ
• ರಂಗ ಮಂದಿರ, ಬಾಗಲಗುಂಟೆ

Exit mobile version