Site icon PowerTV

ಇಂದಿನಿಂದ ರಾಯರ 351ನೇ ಆರಾಧನಾ ಮಹೋತ್ಸವ ಆರಂಭ

ರಾಯಚೂರು : ಇಂದಿನಿಂದ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಮಹಾಸ್ವಾಮಿಗಳ 351 ನೇ ಆರಾಧನಾ ಮಹೊತ್ಸವ ಆರಂಭವಾಗಿದ್ದು, ರಾಯರ ಮೂಲ ಬೃಂದಾವನಕ್ಕೆ ಒಂದು ವಾರ ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿಯಾಗಲಿದೆ.

ನಾಡಿನ ಮೂಲೆ ಮೂಲೆಯಿಂದಲೂ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ಆಗಮಿಸುತ್ತಿದ್ದು, ಆರಾಧನೆಗೆ ಬಂದಿರುವ ಭಕ್ತರಿಗೆ ಶ್ರಿಮಠ ಸಕಲ ಸೌಕರ್ಯ ಕಲ್ಪಿಸಿದೆ. ತುಂಗಭದ್ರ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಆದ ಹಿನ್ನೆಲೆಯಲ್ಲಿ ನದಿ ದಂಡೆಯತ್ತ ತೆರಳದಂತೆ ರಾಯರ ಭಕ್ತರಿಗೆ ಮಂತ್ರಾಲಯ ಶ್ರೀಮಠವು ಸೂಚನೆ ನೀಡಿದೆ.

Exit mobile version