Site icon PowerTV

ಗ್ಯಾಸ್ ಟ್ಯಾಂಕರ್ ಪಲ್ಟಿ ತಪ್ಪಿದ ಭಾರಿ ಅನಾಹುತ.!

ಉತ್ತರ ಕನ್ನಡ : ಜಿಲ್ಲೆಯ ಹೊನ್ನಾವರ ಪಟ್ಟದ ಗೇರಸೊಪ್ಪಾ ರ‍್ಕಲ್ ಬಳಿ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ತಪ್ಪಿದ ಘಟನೆ ಇಂದು ನಡೆದಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಹೆದ್ದಾರಿಯಲ್ಲಿ ಉಳಿದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಸಾಗುತ್ತಿತ್ತು. ಈ ವೇಳೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.

ಸದ್ಯ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಮುಂಜಾಗೃತಾ ಕ್ರಮಕೈಗೊಂಡಿದ್ದಾರೆ. ಗ್ಯಾಸ್ ಸೋರಿಕೆ ಕುರಿತು ಪರಿಶೀಲನೆ ನಡೆಸಲು ಮಂಗಳೂರಿಂದ ವಿಶೇಷ ತಂಡವೊಂದು ಆಗಮಿಸುತ್ತಿದೆ.

ಪಲ್ಟಿಯಾದ ಪರಿಣಾಮವಾಗಿ ಮುಂಜಾಗ್ರತ ಕ್ರಮವಾಗಿ ಲಘು ವಾಹನಗಳ ಸಂಚಾರಕ್ಕೆ ಬದಲಿ ಮರ‍್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಮಂಗಳೂರು ಕಡೆಯಿಂದ ಬರುವ ವಾಹನಕ್ಕೆ ಗೇರುಸೊಪ್ಪಾ ಮರ‍್ಗದ ಆರೊಳ್ಳಿ ಸಾಲ್ಕೋಡು, ಅರೇಅಂಗಡಿ ಮರ‍್ಗವಾಗಿ ಚಂದಾವರ ಮೂಲಕ ಕುಮಟಾಕ್ಕೆ ಸಂರ‍್ಕ ಕಲ್ಪಿಸುವ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ಭಾರೀ ಗಾತ್ರದ ವಾಹನ ಹೊರತುಪಡಿಸಿ ಲಘು ವಾಹನಗಳ ಸಂಚಾರವನ್ನು ದರ‍್ಗಾಕೇರಿ ಮರ‍್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಟ್ಯಾಂಕರ್ ಮೇಲೆತ್ತಯವವರೆಗೂ ಕೂಡ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನರ‍್ಬಂಧ ಮಾಡಲಾಗಿದೆ.

Exit mobile version