Site icon PowerTV

ಸಿಎಂ ಬದಲಾವಣೆ ವದಂತಿ, ದೆಹಲಿಯಿಂದ ನೇರವಾಗಿ ಬಿಎಸ್​ವೈ ಭೇಟಿ ಮಾಡಿದ ಜಗದೀಶ್​ ಶೆಟ್ಟರ್​

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹೆಚ್ಚುತ್ತಿದ್ದಂತೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನ ಸಚಿವ ಜಗದೀಶ್​ ಶೆಟ್ಟರ್ ಅವರು​ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ದೆಹಲಿಯಿಂದ ಹಿಂತಿರುಗಿದ ನಂತರ ಕಾವೇರಿ ನಿವಾಸದಲ್ಲಿರುವ ಯಡಿಯೂರಪ್ಪ ಅವರ ಮನೆಗೆ ಶೆಟ್ಟರ್​ ಇಂದು ಬೆಳಗ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ದೆಹಲಿಯಲ್ಲಿ ನಡೆಸಿದ ಮಾತುಕತೆಯ ವಿವರವನ್ನ ಬಿಎಸ್ ವೈಗೆ ಜಗದೀಶ್​ ಶೆಟ್ಟರ್​ ಮುಟ್ಟಿಸಿದ್ದಾರೆ ಎನ್ನಲಾಗಿದೆ.

ಸಿಎಂ ಬದಲಾವಣೆ ಯಾದ್ರೆ ಮುಂದೆ ಶೆಟ್ಟರ್ ಸಿಎಂ ಅನ್ನೋ‌ ಮಾತು ಸಹ ಕೇಳಿ ಬರುತ್ತಿದೆ. ಬಿಎಸ್ ವೈ ಸಹ ಶೆಟ್ಟರ್ ಗೆ ಪಟ್ಟಕೊಡಿಸಲು ಸರ್ಕಸ್ ಮಾಡ್ತಿದ್ದಾರೆ. ಇತ್ತೀಚಿಗೆ ರಾಜ್ಯಕ್ಕೆ ಅಮಿತ್ ಶಾ ಭೇಟಿ ವೇಳೆ ಇದೇ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಕಳೆದೈದು ದಿನದಿಂದ ಬಿಎಸ್ ವೈ ಅವರ ಮಾತಿನಂತೆ ಶೆಟ್ಟರ್​ ದೆಹಲಿಯಲ್ಲಿ ಬಿಡು ಬಿಟ್ಟಿದ್ದರು.

ದೆಹಲಿ ಭೇಟಿ ನೀಡಿದ ವೇಳೆ ಹೈಕಮಾಂಡ್ ನಾಯಕರ ಬೇಟಿಯ ವೇಳೆ ನಡೆದ ಮಾತುಕತೆಯ ಬೆಳವಣಿಗೆ ಬಗ್ಗೆ ಶೆಟ್ಟರ್​ ಮಾಹಿತಿ ನೀಡಿದ್ದಾರೆ.

Exit mobile version