Site icon PowerTV

RSS ಮುಖಂಡರಿಗೆ ಧ್ವಜ ಗಿಫ್ಟ್ ನೀಡಿದ ಕಾಂಗ್ರೆಸ್ ಕಾರ್ಯಕರ್ತರು

ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ಎಸ್​ಎಸ್)ದ ಕಚೇರಿಗೆ ಕಾಂಗ್ರೆಸ್ ಮುಖಂಡ ರಾಷ್ಟ್ರೀಯ ಧ್ವಜ ನೀಡಲು ಮುಂದಾದರು.

ಮೊದಲು ಕಾಂಗ್ರೆಸ್ ಕಾರ್ಯಕರ್ತರಿಂದ ಆರ್​ಎಸ್​ಎಸ್​ ಸದಸ್ಯರು ಧ್ವಜ ಸ್ವೀಕರಿಸಲು ನಿರಾಕರಿಸಿದರು. ನಂತರ ಕಾಂಗ್ರೆಸ್ ಹಾಗೂ ಸಂಘದ ಕಾರ್ಯಕರ್ತರ ತೀವ್ರ ವಾಗ್ವಾದ ಬಳಿಕ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠರಿಂದ ಆರ್​ಎಸ್​ಎಸ್​ ಮುಖಂಡರು ಧ್ವಜ ಸ್ವೀಕರಿಸಿದ್ದಾರೆ.

ರಾಜ್ಯದಲ್ಲಿ ಪಾಲಿಸ್ಟರ್​ ಧ್ವಜ ಹಂಚಿಕೆ ಬಗ್ಗೆ ಹಾಗೂ ದ್ವಜ ಸಂಹಿತೆ ತಿದ್ದುಪಡಿ ವಿರುದ್ಧ ಹೋರಾಟ ರಜತ ಉಳ್ಳಗಡ್ಡಿಮಠ ಆರಂಭಿಸಿರುವುದ್ದರು. ಹುಬ್ಬಳ್ಳಿಯಲ್ಲಿ ಹುಟ್ಟಿಕೊಂಡ ಖಾದಿ ಹೋರಾಟ ಈಗ ದೇಶವ್ಯಾಪಿ ತಲುಪಿದ್ದು, ಬಿಜೆಪಿಗರು ನೀಡುತ್ತಿರುವ ಪಾಲಿಸ್ಟರ್ ದ್ವಜ ವಿರೋಧಿಸಿ ಬಿಜೆಪಿ ಪ್ರತಿ ಮುಖಂಡರಿಗೂ ಖಾದಿ ದ್ವಜ ನೀಡಲು ಕಾಂಗ್ರೆಸ್ ತಯಾರಿ ಮಾಡಿದೆ.

Exit mobile version