Site icon PowerTV

ಸಿಎಂ ಬದಲಾವಣೆ ವದಂತಿ, ಬೊಮ್ಮಾಯಿಗೆ ಕರೆ ಮಾಡಿದ ಪ್ರಧಾನಿ ಕಚೇರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ದೂರವಾಣಿ ಕರೆ ಮಾಡಿ ಸಿಎಂ ಬದಲಾವಣೆ ಅನ್ನುವ ವದಂತಿ ಎಲ್ಲಿಂದ ಹಬ್ಬುತ್ತಿದೆ ಈ ಕುರಿತು ವರದಿ ಕೊಡುವಂತೆ ಪಿಎಂ ಅಧಿಕೃತ ಕಚೇರಿ ಕೇಳಿದೆ.

ಸಿಎಂ ಬದಲಾವಣೆ ವದಂತಿ ಹಬ್ಬಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ನಿಮ್ಮನ್ನು ಬದಲಾಯಿಸುವುದಿಲ್ಲ. ನಿಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದೇವೆ. ನಿಮ್ಮ ಕೆಲಸದ ಬಗ್ಗೆ ನಮಗೆ ಮೆಚ್ಚುಗೆ ಇದೆ ಎಂದಿದೆ.

ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ. ವದಂತಿ ಯಾರು ಹಬ್ಬಿಸುತ್ತಿದ್ದಾರೆ ಎಂಬ ಬಗ್ಗೆ ನಾವು ನೋಡಿಕೊಳ್ಳುತ್ತೇವೆ ನೀವು ರಾಜ್ಯ ಪ್ರವಾಸ ಮಾಡಿ. ಪಕ್ಷ ಸಂಘಟನೆ ಮಾಡಿ, ಸರ್ಕಾರದ ಯೋಜನೆಗಳನ್ನು ಜನತೆಗೆ ತಪುಪಿಸಿ ಎಂದು ಪ್ರಧಾನಿ ಕಚೇರಿಯಿಂದ ಸಂದೇಶ ಬಂದಿದೆ.

Exit mobile version