Site icon PowerTV

ಬಿಜೆಪಿಯವರಿಗೆ ರೈತರ ಸಂಕಷ್ಟದ ಬಗ್ಗೆ ಅರಿವಿಲ್ಲ : ಹೆಚ್.ಡಿ ರೇವಣ್ಣ

ಹಾಸನ: ಶಿವಲಿಂಗೇಗೌಡ ಶಾಸಕನಾದ ನಂತರ ಅರಸೀಕೆರೆ ‌ಇತಿಹಾಸದಲ್ಲಿ ಮಾಡದ ಬದಲಾವಣೆ ಮಾಡಿದ್ದಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಕೃಷಿ ಚಟುವಟಿಕೆ ಸಂಪೂರ್ಣ ನಾಶಹೊಂದಿದೆ. ರೈತರು ಹೂಡಿದ ಬಂಡವಾಳವೂ ಸಿಗುತ್ತಿಲ್ಲ. ವಿಷ ಕುಡಿಯುವ ಸ್ಥಿತಿಗೆ ರೈತರು ಬಂದಿದ್ದಾರೆ. ಜಿಲ್ಲೆಯಲ್ಲಿ 750 ಕೋಟಿಯಿಂದ 900 ಕೋಟಿ ನಷ್ಟವಾಗಿದೆ. ಕೂಡಲೇ ಜಿಲ್ಲಾಧಿಕಾರಿ ಶಾಸಕರ ಸಭೆ ಕರೆದು ಚರ್ಚಿಸಿ ಸರ್ಕಾರಕ್ಕೆ ವಸ್ತುಸ್ಥಿತಿ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಅಧಿಕಾರಿಗಳು ನಿರ್ಲಕ್ಷ್ಯ ಮಾಡದೇ ಕೆಲಸ ಮಾಡಬೇಕು. ಕೂಡಲೇ ಪ್ರತಿ ಜಿಲ್ಲೆಗೆ 50 ಕೋಟಿ ಹಣ ನೀಡಬೇಕು ಎಂದು ಆಗ್ರಹ. ಶಿವಲಿಂಗೇಗೌಡ ಶಾಸಕನಾದ ನಂತರ ಅರಸೀಕೆರೆ ‌ಇತಿಹಾಸದಲ್ಲಿ ಮಾಡದ ಬದಲಾವಣೆ ಮಾಡಿದ್ದಾರೆ. ಈ ಬಿಜೆಪಿಯವರಿಗೆ ರೈತರ ಸಂಕಷ್ಟದ ಬಗ್ಗೆ ಅರಿವಿಲ್ಲ ಎಂದರು.

ಶಿವಲಿಂಗೇಗೌಡನನ್ನ ರಾಗಿ ಕಳ್ಳ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಗಿ ಮಾರಿದ್ರೆ ಶಿವಲಿಂಗೇಗೌಡ, ರೇವಣ್ಣನ ಅಕೌಂಟ್ ಗೆ ಹಣ ಬರುತ್ತಾ. ಜಿಲ್ಲೆಯಲ್ಲಿ ಬಿಜೆಪಿಯವರು ಲೂಟಿ ಹೊಡೆಯುತ್ತಿದ್ದಾರೆ. ಮಾನ ಮಾರ್ಯಾದೆ ಇದ್ರೆ ಜನಪರ ಕೆಲಸ ಮಾಡಲಿ. ಬಿಜೆಪಿಯವರು ಪರ್ಮನೆಂಟಾಗಿ ಕುಮಾಸ್ವಾಮಿ ಫೋಟೋ ಇಡ್ಕೋಬೇಕು, ಕಾಂಗ್ರೆಸ್​​ನವರು ಮಾಡಿದ ಎಡವಟ್ಟಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

Exit mobile version