Site icon PowerTV

ಮಳೆಯ ಆರ್ಭಟಕ್ಕೆ ಕೊಚ್ಚಿಹೋಯಿತು ಒಂದು ಎಕರೆ ಕಾಫಿ ತೋಟ

ಚಿಕ್ಕಮಗಳೂರು : ನಿಲ್ಲದ ಮಳೆಯ ಅವಾಂತರದಿಂದ ಒಂದು ಎಕರೆ ಕಾಫಿ ತೋಟ ಕೊಚ್ಚಿಹೋಗಿದ್ದು, ಚಿಕ್ಕಮಗಳೂರು ತಾಲೂಕಿನ ತುಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ತೋಟ ಸರ್ವನಾಶವಾಗಿದೆ.

ಅಣ್ಣಪ್ಪ ಶೆಟ್ಟಿ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ನಾಶವಾದ ಹಿನ್ನೆಲೆ ತೋಟದಲ್ಲಿ ಹೊಸ ಹಳ್ಳ ಕೊಳ್ಳಗಳು ಸೃಷ್ಟಿಯಾಗಿದೆ. ಅಣ್ಣಪ್ಪ ಶೆಟ್ಟಿ ಅವರು ಬೆಳಗ್ಗೆ ಎದ್ದಾಗ ತೋಟದ ಸ್ಥಿತಿ ಕಂಡು ಆತಂಕಕ್ಕಿಡಾಗಿದ್ದಾರೆ, ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ಎಲ್ಲಾ ಮಳೆಯ ಆರ್ಭಟಕ್ಕೆ ನಾಶವಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಒತ್ತಾಯಿಸಿದ್ದಾರೆ.

Exit mobile version