Site icon PowerTV

ಭಾರತದ ಅಚಂತ ಶರತ್ ಕಮಲ್​ಗೆ ಮತ್ತೊಂದು ಚಿನ್ನ

ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್-2022ರ ಟೇಬಲ್ ಟೆನ್ನಿಸ್ನ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಅಚಂತ ಶರತ್ ಕಮಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ನ ಲಿಯಾಮ್ ಪಿಚ್ಫೋರ್ಡ್ ಅವರನ್ನು ಸೋಲಿಸಿ ಅಚಂತ ಭಾರತಕ್ಕೆ ಬಂಗಾರ ಪದಕ ತಂದುಕೊಟ್ಟರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಭಾರತದ ನಂಬರ್ ಒನ್ ಜೋಡಿ ಇಂಗ್ಲೆಂಡ್‌ನ ಲೇನ್ ಮತ್ತು ವೆಂಡಿ ಜೋಡಿಯನ್ನು ಸೋಲಿಸಿ ಡಬಲ್ಸ್​ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಮುನ್ನ ಈ ಜೋಡಿ 2018ರಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಇದೀಗ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಪಾರುಪತ್ಯ ಮೆರೆದಿದ್ದಾರೆ. ಇನ್ನು, ಪುರುಷರ ಹಾಕಿ ತಂಡ ಬೆಳ್ಳಿ ಗೆದ್ದುಕೊಂಡಿದೆ. ಈ ಮೂಲಕ 22 ಚಿನ್ನದ ಜೊತೆಗೆ ಪದಕಗಳ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

Exit mobile version