ಜಪಾನ್ ಮ್ಯಾಗಜಿನ್​​ನಲ್ಲಿ KGF ಸೆನ್ಸೇಷನಲ್ ನ್ಯೂಸ್

ಕೆಜಿಎಫ್​ ಸುಲ್ತಾನನ ಬಗ್ಗೆ ಸಾವಿರ ಪುಟಗಳು ಬರೆದರೂ ಸಾಲೊಲ್ಲ. ಅದ್ಭುತ ಪದಗಳಲ್ಲಿ ವರ್ಣಿಸಿದರೂ ಜಾಸ್ತಿ ಏನಲ್ಲ. ವರ್ಲ್ಡ್​​ ಇಸ್​ ಮೈ ಟೆರಿಟರಿ ಅನ್ನೋ ಸಿಂಗಲ್​ ವರ್ಡ್​​ ಹಿಂದೆ ರಾಕಿಭಾಯ್​ ದೂರದೃಷ್ಟಿ ಎಷ್ಟು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದೀಗ ಸೂರ್ಯ ಮುಳುಗದ ನಾಡು ಜಪಾನ್​​ ಕಡಲ ಕಿನಾರೆಗೂ ಮಾಸ್ಟರ್​​ ಪೀಸ್​​ ಹೆಜ್ಜೆ ಗುರುತು ಬಿದ್ದಾಗಿದೆ. ಯೆಸ್​​. ರಾಕಿಭಾಯ್​ ತಾಕತ್ತು ಎಂತದ್ದು ಅನ್ನೋದನ್ನ ಮತ್ತೊಮ್ಮೆ ಸಾರಿ ಹೇಳ್ತೀವಿ. ನೀವೇ ಓದಿ.

  • ಸುವರ್ಣಾಕ್ಷರಗಳಲ್ಲಿ ರಾಕಿಭಾಯ್​​ ಸಾಧನೆ ಗುಣಗಾನ

ಧರೆಯೇ ಹೊತ್ತಿ ಉರಿದರೂ ಸಾಗಿ ಬಂದ ರಾಕಿಭಾಯ್​ ಯಶಸ್ಸಿನ ಹಾದಿಯನ್ನು ಯಾರೇ ನೋಡಿದರೂ ಮೈ ರೋಮಾಂಚನವಾಗುತ್ತೆ. ಒಬ್ಬ ಬಸ್​ ಡ್ರೈವರ್​ ಮಗನ ದೊಡ್ಡ ಕನಸಿನ ಹಾದಿಯೇ ರೋಚಕವಾಗಿದೆ. ಯಶ್​​ ಸಿನಿಕರಿಯರ್​​ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತೆ. ಕನ್ನಡದ ನಟನಾಗಿ ಇಂದು ಜಗತ್ತಿನಾದ್ಯಂತ ಎಲ್ಲರೂ ಕೊಂಡಾಡೋ ಲೆವೆಲ್​​ಗೆ ಬೆಳೆದು ನಿಂತಿದ್ದಾರೆ ರಾಕಿಂಗ್​ ಸ್ಟಾರ್​​​. ಪ್ರಪಂಚದ ಯಾವ ಮೂಲೆಗೆ ಹೋದ್ರು ಕನ್ನಡದ ರಾಕಿಭಾಯ್​​ ಬಗ್ಗೆ ಮಾತನಾಡುತ್ತಾರೆ. ನಮಗೆ ಯಶ್​ ಅಂದ್ರೆ ತುಂಬಾ ಇಷ್ಟ ಅಂತಾ ಹಾಡಿ ಹೊಗಳುತ್ತಾರೆ.

ನಾವಾಡೋ ಮಾತುಗಳು ಕೆಲವರಿಗೆ ಉತ್ಪ್ರೇಕ್ಷೆ ಅನಿಸಿದರೂ, ಅದನ್ನು ಪ್ರೂವ್​ ಮಾಡೋ ವಾಸ್ತವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಯೆಸ್​​. ಇದೀಗ ಸೂರ್ಯ ಮುಳುಗದ ನಾಡು, ಟೆಕ್ನಾಲಜಿಯಲ್ಲಿ ಇಡೀ ವಿಶ್ವವೇ ನಿಬ್ಬೆರಗಾಗುವ ಮಟ್ಟಿಗೆ ಹೆಸ್ರು ಮಾಡಿರೋ ಜಪಾನ್​​ನಲ್ಲಿ ಯಶ್​​ ಹೆಸ್ರು ಮೊಳಗುತ್ತಿದೆ. ಜಪಾನ್​​ನ ಮ್ಯಾಗಜಿನ್​ ಪತ್ರಿಕೆಯೊಂದರಲ್ಲಿ ಯಶ್​ ಕುರಿತಾಗಿ ದೊಡ್ಡ ಆರ್ಟಿಕಲ್​ ಪ್ರಕಟವಾಗಿದೆ. ಈ ಮೂಲಕ ಕನ್ನಡದ ಸ್ಟಾರ್​​ ನಟ ಜಪಾನ್​ನಲ್ಲಿ ಗುಡುಗ್ತಿದ್ದಾನೆ.

  • ಕೆಜಿಎಫ್​ ಸಕ್ಸಸ್​​ಫುಲ್​​ ಜರ್ನಿ ಕುರಿತು ವಿಶೇಷ ವರದಿ..!
  • ಬುನ್ಷುನ್​​​ ಪತ್ರಿಕೆ ಮುಖಪುಟದಲ್ಲಿ ತೂಫಾನ್​​ ಅಬ್ಬರ

ಕೆಜಿಎಫ್​​ ಸಿನಿಮಾ ಇಡೀ ಸಿನಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದದ್ದು ಎಲ್ಲರಿಗೂ ಗೊತ್ತೆ ಇದೆ. ಒಟ್ಟು 1250 ಕೋಟಿಗೂ ಅಧಿಕ ಲಾಭ ಗಳಿಸಿದ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​​ ಚಾಪ್ಟರ್​​ 2. ಈ ಸಿನಿಮಾದ ಸಕ್ಸಸ್​​ ಜರ್ನಿ ಬಗ್ಗೆ ಸಿನಿಮಾ ರಂಗದಲ್ಲಿ ಎಲ್ಲರಿಗೂ ಕುತೂಹಲವಿದೆ. ಈ ಚಿತ್ರದ ಮೇಕಿಂಗ್​ ಸ್ಟೈಲ್​​​​ನಾ ಇತ್ತೀಚೆಗೆ ಎಲ್ಲರೂ ಕಾಪಿ ಪೇಸ್ಟ್​ ಮಾಡ್ತಿದ್ದಾರೆ. ಹಾಗಾಗಿಯೇ ಜಪಾನ್​​ ದೇಶದ ಜನಪ್ರಿಯ ಪತ್ರಿಕೆ ಬುನ್​ಶುನ್​ ಮ್ಯಾಗಜಿನ್​ ಮುಖಪುಟದಲ್ಲಿ ಕೆಜಿಎಫ್​ ಸಕ್ಸಸ್​​ ಬಗ್ಗೆ ವರದಿ ಪ್ರಕಟವಾಗಿದೆ.

ಕೆಜಿಎಫ್​ ಸಿನಿಮಾವನ್ನು ಕೇವಲ ಭಾರತೀಯ ಚಿತ್ರರಂಗ ಮಾತ್ರ ಒಪ್ಪಿಕೊಂಡಿದ್ದಲ್ಲದೇ ಇಡೀ ವಿಶ್ವವೇ ಅಪ್ಪಿ ಮುದ್ದಾಡಿದೆ. ರಾಕಿಂಗ್ ಸ್ಟಾರ್​ ಆ್ಯಕ್ಟಿಂಗ್​ ಮ್ಯಾನರಿಸಂಗೆ ಕ್ಲೀನ್​ ಬೋಲ್ಡ್​ ಆಗಿದೆ. ಜಪಾನ್​​ ಮ್ಯಾಗ್​ಜಿನ್​ನಲ್ಲಿ ಪ್ರಕಟಗೊಂಡಿರೋ ಕೆಜಿಎಫ್​​ ಸಕ್ಸಸ್​​ಫುಲ್​​ ಜರ್ನಿಯ ಲೇಖನ ಕಂಡು ಫ್ಯಾನ್ಸ್​ ಕೂಡ ಥ್ರಿಲ್​ ಆಗಿದ್ದಾರೆ. ಇದ್ರ ಜತೆಯಲ್ಲಿ ಆರ್​ಆರ್​ಆರ್​​ ಚಿತ್ರದ ಬಗ್ಗೆಯೂ ಕೂಡ ಬರೆಯಲಾಗಿದೆ. ಒಟ್ಟಾರೆ ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್​ಆಫೀಸ್​ ಧೂಳೆಬ್ಬಿಸಿದ ಸಿನಿಮಾಗಳ ಬಗ್ಗೆ ಜಪಾನ್​​ ಆಸಕ್ತಿ ತೋರಿದೆ.

ಗಲ್ಲಿಯಿಂದ ದಿಲ್ಲಿವರೆಗೂ ಯಶ್​ ಸಿನಿಮಾಗಳ ಬಗ್ಗೆ ಚರ್ಚೆ ನಡೀತಿದ್ರೆ, ಯಶ್​ ಮಾತ್ರ ಯುರೋಪ್​​, ಇಟಲಿ ಪ್ರವಾಸ ಅಂತಾ ಜಾಲಿಮೂಡ್​ನಲ್ಲಿದ್ದಾರೆ. ರಿಲ್ಯಾಕ್ಸ್​ ಮೂಡ್​ ನಡುವೆ ಯಾವುದೋ ದೊಡ್ಡ ಪ್ರಾಜೆಕ್ಟ್​​​ ಬಗ್ಗೆ ಪ್ಲಾನ್​ ಮಾಡ್ತಾ ಇರಬಹುದಾ ಅನ್ನೋ ಗುಸು ಗುಸು ಮಾತುಗಳು ಕೇಳಿದ್ದರೂ ಯಶ್​​ರ ಹತ್ತೊಂಬತ್ತನೇ ಸಿನಿಮಾ ಮೇಲೆ ಬೆಟ್ಟದಷ್ಟೂ ನೀರೀಕ್ಷೆ ಇದೆ. ಪ್ಯಾನ್​ ಇಂಡಿಯಾ ದಾಟಿ ಗ್ಲೋಬಲ್​​ ಲೆವೆಲ್​ಗೆ ಮಿಂಚೋಕೆ ಯಶ್​ ತಯಾರಿ ನಡೆಸಿದ್ದಾರಾ ಅನ್ನೋ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES