ಧಾರವಾಡ : ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ವಿಧಿವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ. ಹಾಗಾದ್ರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ಎಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಮ್ಮ ಅಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ವಕ್ಫ್ ಬೋರ್ಡ್ ದು ಅಲ್ಲ, ಮುಸ್ಲಿಂ ದು ಅಲ್ಲ, ಇದು ಹಿಂದೂಗಳದ್ದು ಅಲ್ಲ. ಸರ್ಕಾರದ ಜಾಗ ಅದು, ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ವಿಧಿವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ ಎಂದರು.
ಅದಲ್ಲದೇ, ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ..? ನೀವು ಕೇವಲ ಮುಸ್ಲಿಂ ಓಟಿನ ಮೇಲೆ ಗೆದ್ದಿಲ್ಲ. ನೀವು ಮುಸ್ಲಿಂರಿಂದ ಮಾತ್ರ ಗೆದ್ದಿಲ್ಲ, ಮುಸ್ಲಿಂ MLA ಅಲ್ಲ. ನೀವು ಚಾಮರಾಜಪೇಟೆ ಶಾಸಕ, ನಿಮಗೆ ಹಿಂದೂಗಳು ಓಟು ಹಾಕಿದ್ದಾರೆ ನೆನೆಪಿಟ್ಟುಕೊಳ್ಳಿ. ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಅದನ್ನ ನೀವು ವಾಪಾಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು. ನಿಮ್ಮಲ್ಲಿ ತಾಕತ್ ಇದ್ದರೆ, ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡ್ತಿವಿ. ತಾಕತ್ತಿದ್ದರೆ ಅದನ್ನ ವಿರೋಧ ಮಾಡಿ. ಈ ರೀತಿಯ ಹೇಳಿಕೆಯಿಂದ ಅಶಾಂತಿ ಮತ್ತು ಗಲಭೆ ಸೃಷ್ಟಿ ಮಾಡ್ತಿದ್ದೀರಿ ಎಂದರು.
ಇನ್ನು, ನೀವೇನಾದರೂ ಮುಂದೆ ಜಮೀರ್ ಗೆ ಮತ ಹಾಕಿದ್ರೆ, ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ. ಅವರ ಸೊಕ್ಕನ್ನ ಮುರಿಯಬೇಕು ಅಂದ್ರೆ ಮುಂಬರೋ ಚುನಾವಣೆಯಲ್ಲಿ ಸೋಲಿಸಬೇಕು. ವಿಜೃಂಭನೆಯಿಂದ ಅಲ್ಲಿ ನಾನು ಮತ್ತು ಹಿಂದುಗಳೆಲ್ಲ ಗಣೇಶೋತ್ಸವ ಮಾಡ್ತಾರೆ. ರಾಷ್ಟ್ರ ಧ್ವಜ ಹಾರಿಸೋ ಮಾತಿಗೆ ನಾವು ಸಹ ಬರ್ತೀವಿ. ಎಲ್ಲಾ ಜನರು ಅದಕ್ಕೆ ಬರ್ತಾರೆ. ಕೇವಲ 75 ಸಂಭ್ರಮಾಚರಣೆಗೆ ಮಾತ್ರ ಅಲ್ಲ. ಪ್ರತಿ ಜನವರಿ 26 ಹಾಗೂ ಆಗಸ್ಟ್ 15 ರಂದು ಧ್ವಜ ಹಾರಬೇಕು. ಧ್ವಜ ಹಾರಿಸುವ ವಿಚಾರದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರು.


