ಪ್ರೀತಿ ಪ್ರೇಮದ ಹೊಳೆ ಹರಿಸಿದ್ದ ಕನ್ನಡಿಗರ ಪ್ರಾಣದ ಪದಕ ಓ ಮೈ ಲವ್ ಸಿನಿಮಾ. ಸಿನಿಮಾ ನೋಡಿದ ಪ್ರೇಕ್ಷಕರ ಎದೆಯಲ್ಲಿ ತಕಧಿಮಿತ ಕಂಪನವಾಗಿತ್ತು. ಅಕ್ಷಿತ್ ಶಶಿಕುಮಾರ್ ಚೊಚ್ಚಲ ಸಿನಿಮಾದಲ್ಲೆ ಗೆಲವಿನ ನಗೆ ಬೀರಿದ್ರು. ಸ್ನೇಹ ಪ್ರೀತಿ ಕೌಟುಂಬಿಕ ಸಂಬಂಧಗಳ ದಿಬ್ಬಣ ಓ ಮೈ ಲವ್ ಅರ್ಧ ಶತಕ ಬಾರಿಸಿದೆ. ಯೆಸ್.. ಯಶಸ್ವಿ 50 ದಿನ ಪೂರೈಸಿರುವ ಓ ಮೈ ಲವ್ ಚಿತ್ರದ ಸ್ಪೆಷಲ್ ಅಪ್ಡೇಟ್ ಇಲ್ಲಿದೆ.
- ಸ್ನೇಹ, ಪ್ರೀತಿಯ ಅತಿರೋಚಕ ಕಹಾನಿಗೆ ಫುಲ್ ಮಾರ್ಕ್ಸ್..!
ಓ ಮೈ ಲವ್ ಗುಬ್ಬಿ ಗೂಡಲ್ಲಿ ಕೌಟಂಬಿಕ ಮೌಲ್ಯಗಳನ್ನು ಸಾರಿ ಹೇಳಿದ್ದ ಮ್ಯೂಸಿಕಲ್ ಹಿಟ್ ಸಿನಿಮಾ ಓ ಮೈ ಲವ್. ನಾವಿಕ ಶ್ರೀನು ಸಾರಥ್ಯದಲ್ಲಿ ಕಂಪ್ಲೀಟ್ 50 ದಿನ ಪೂರೈಸಿ ಯಶಸ್ವಿಯಾಗಿದೆ. ತುಂಬಿದ ಕುಟುಂಬಕ್ಕೆ ಕೇರ್ ಆಫ್ ಅಡ್ರೆಸ್ ಕಥೆಯಾಗಿದ್ದ ಓ ಮೈ ಲವ್ ಸಿನಿಮಾಗೆ ಸಿನಿರಸಿಕರು ಫಿದಾ ಆಗಿದ್ದು ಸಿನಿಮಾವನ್ನು ಗೆಲ್ಲಿಸಿದ್ದಾರೆ.

ಚಿತ್ರದ ಮೋಹದ ಅಧಿನಾಯಕನಾಗಿ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಮನಮೋಹಕವಾಗಿ ಅಭಿನಯಿಸಿದ್ರು. ಚಿತ್ರದಲ್ಲಿ ಪ್ರೀತಿ ಸ್ನೇಹ ಅತಿರೋಚಕವಾಗಿ ಮೂಡಿ ಬಂದಿತ್ತು. ಅನುರಾಗದ ಅನೇಕ ರೂಪಕಗಳನ್ನು ತೋರಿಸಿ ಪ್ರೇಕ್ಷಕರನ್ನು ಸೀಟಿನಲ್ಲಿ ಕೂರುವಂತೆ ಮಾಡಿತ್ತು. ಮಸ್ತ್ ಮನರಂಜನೆಯ ಪುಳಕದೊಂದಿಗೆ, ಪ್ರತಿ ಕ್ಷಣವೂ ತವಕ ಹುಟ್ಟು ಹಾಕಿದ್ದ ಓ ಮೈ ಲವ್ ಚಿತ್ರಕ್ಕೆ ಕ್ಲೀನ್ ಬೋಲ್ಡ್ ಆಗಿದ್ದರು. ಇದೀಗ ಚಿತ್ರತಂಡ ಫುಲ್ ಖುಷಿ ಮೂಡ್ನಲ್ಲಿದೆ.
- ಕ್ಲಿಕ್ ಆಯ್ತು ರಾಮಾಂಜಿನಿ ಕಥೆ.. ಸ್ಮೈಲ್ ಶ್ರೀನು ಕರಾಮತ್ತು..!
- ಫ್ಯಾಮಿಲಿ ಎಲಿಮೆಂಟ್ಸ್ ಹಾಗೂ ಹಾಸ್ಯದ ಜೊತೆಗೆ ಪ್ರೇಮಕಥೆ
ಸ್ಮೈಲ್ ಶ್ರೀನು ರೆಗ್ಯುಲರ್ ಜಾನರ್ ಬಿಟ್ಟು ಬೇರೆ ತರಹದ ಕಥೆಯನ್ನು ಹೇಳಲು ಹೊರಟು ಸಕ್ಸಸ್ ಆಗಿದ್ದಾರೆ. ಫ್ಯಾಮಿಲಿ ಎಲಿಮೆಂಟ್ಸ್ ಜೊತೆಗೆ ಹಾಸ್ಯದ ಮಸಾಲೆ ಬೆರೆಸಿ ಒಂದೊಳ್ಳೆ ಜೋಡಿಯ ಪ್ರೇಮಕಥೆಯನ್ನು ಮನಸ್ಸು ಮುಟ್ಟುವಂತೆ ತೋರಿಸಿದ್ದರು. ಸನಾದಿ ಅಪ್ಪಣ್ಣ ಕುಟುಂಬದ ಕುಡಿಯಾದ ಕೀರ್ತಿ ಕಲ್ಕೆರೆ ನಾಯಕಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ನಟನೆಯಲ್ಲಿ ಇಬ್ಬರೂ ಪಳಗಿದವರಂತೆ ಅಭಿನಯಿಸಿದ್ದರು.
ಜ್ಯೂನಿಯರ್ ಸುಪ್ರೀಂ ಹೀರೋ ಮೊದಲ ಸಿನಿಮಾದಲ್ಲೇ ಅಭಿನಯ ಚತುರತೆಯನ್ನು ತೋರಿದ್ದಾರೆ. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸ್ಸಿನ ಯುವ ಮನಸುಗಳ ತಳಮಳ, ಪ್ರೀತಿ, ಪ್ರೇಮದ ಕುರಿತಾದ ವಿಷಯಗಳನ್ನು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಮ್ಯಾನರಿಸಂ ಹೊಂದಿಸಿದ್ದರು ಅಕ್ಷಿತ್ ಶಶಿಕುಮಾರ್. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಮ್ಯೂಸಿಕಲ್ ಲವ್ ಸ್ಟೋರಿ 50ರ ಸಂಭ್ರಮದ ದಿನ ಆಚರಿಸ್ತಾ ಇದೆ.

ನಿರ್ಮಾಪಕ ಜಿ.ರಾಮಾಂಜಿನಿ ಅವ್ರು ಈ ಚಿತ್ರಕ್ಕೆ ಬರೀ ಹಣವಷ್ಟೇ ಹೂಡಿಲ್ಲ. ಬದಲಿಗೆ ಕಥೆ ಕೂಡ ಅವರದ್ದೇ. ಒಂದೊಳ್ಳೆ ಸಿನಿಮಾನ ಕನ್ನಡದ ಜನತೆಗೆ ಕಾಣಿಕೆಯಾಗಿ ನೀಡಬೇಕು ಅನ್ನೋ ಉದ್ದೇಶದಿಂದ ಆತ್ಮೀಯ ಗೆಳೆಯ ಸ್ಮೈಲ್ ಶ್ರೀನು ಬಳಿ ಡೈರೆಕ್ಟ್ ಮಾಡಿಸಿದ್ದಾರೆ. ಸಿನಿಮಾದ ಮೇಕಿಂಗ್ ಕ್ವಾಲಿಟಿ ನೆಕ್ಸ್ಟ್ ಲೆವೆಲ್ಗಿದೆ. ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್, ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅಂತೂ, ಪ್ರಾಮಾಣಿಕ ಸಿನಿಮಾಗಳನ್ನು ಪ್ರೇಕ್ಷಕ ಕೈ ಬಿಡೋದಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ


