ಮಾರ್ಟಿನ್ ಪೋಸ್ಟ್​ಪೋನ್.. ವಿಐಪಿಗಳು ವಿಲ ವಿಲ

ಪ್ಯಾನ್​ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಕುತೂಹಲ ಕೆರಳಿಸಿರುವ ಮಾರ್ಟಿನ್​ ಚಿತ್ರತಂಡದಿಂದ ಹೊಸ ಅಪ್ಡೇಟ್​ ಸಿಕ್ಕಿದೆ. ಪೊಗರಿನ ಟಗರು ಧ್ರುವ ಸರ್ಜಾ ಅವರ ಜಬರ್ದಸ್ತ್​​ ಆ್ಯಕ್ಷನ್​ ನೋಡೋಕೆ ಕನವರಿಸುತ್ತಿರುವ ಫ್ಯಾನ್ಸ್​ಗಳಿಗೆ ಸಖತ್​ ನಿರಾಸೆಯಾಗಿದೆ. ಯೆಸ್​​​ಮಾರ್ಟಿನ್​​​ ಕೊಟ್ಟ ಆ ಕಹಿ ಸುದ್ದಿ ಏನ್​ ಗೊತ್ತಾ ನೀವೇ ಓದಿ.

  • ಸೆ-30, ದಸರಾಗಿಲ್ಲ ಮಾರ್ಟಿನ್ ಥಿಯೇಟರ್ ಎಂಟ್ರಿ

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ತಮ್ಮದೇ ಫ್ಯಾನ್ಸ್​ ಫಾಲೊಯಿಂಗ್​ ಹೊಂದಿದ್ದಾರೆ. ಪೊಗರು ಚಿತ್ರದ ನಂತ್ರ ಅಣ್ಣನ ಸಿನಿಮಾ ನೋಡೋಕೆ ಅಭಿಮಾನಿಗಳು ಕೂಡ ಕನವರಿಸ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ  ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಮಾರ್ಟಿನ್​​ ಜಪ ಮಾಡ್ತಿರೋ ಹುಚ್ಚು ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆಯಾಗಿದೆ. ಇನ್ನೇನು ಸೆ.30 ರಂದು ಮಾರ್ಟಿನ್​ ಚಿತ್ರವನ್ನು ಭರ್ಜರಿಯಾಗಿ ವೆಲ್ಕಮ್​ ಮಾಡೋಕೆ ಪ್ಲಾನ್​​ ಮಾಡ್ತಿದ್ದ ಫ್ಯಾನ್ಸ್​​ಗೆ ದೊಡ್ಡ ಹಿನ್ನೆಡೆಯಾಗಿದೆ.

ಉಕ್ಕಿನ ಮಾಂಸಖಂಡ, ಕಬ್ಬಿಣದಂತ ತೋಳುಗಳಿಂದ ಎದುರಾಳಿ ವಿಲನ್​ಗಳನ್ನು ಸೆದೆಬಡಿಯೋ ಆ್ಯಕ್ಷನ್​ ಪ್ರಿನ್ಸ್​​ ಸಿನಿಮಾಗಾಗಿ ಚಾತಕ ಪಕ್ಷಿಗಳಂತೆ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಸ್ಟಂಟ್​ ಮಾಸ್ಟರ್​ ರವಿವರ್ಮಾ ಕೂಡ ನೆಕ್ಸ್ಟ್​ ಲೆವೆಲ್​​ ಆ್ಯಕ್ಷನ್​ ಸೀಕ್ವೆನ್ಸ್​​ ಮಾಡಿಸಿದ್ದಾರೆ. ಮಸ್ತ್​ ಮೆಗಾ ಮಾಸ್​ ಸಿನಿಮಾ ಮಾರ್ಟಿನ್​​ ಸೆ.30ಕ್ಕೆ ರಿಲೀಸ್​ ಆಗೋದಾಗಿ ಅನೌನ್ಸ್​ ಮಾಡಿತ್ತು. ಆದ್ರೆ, ಇದೀಗ ಕಾರಣಾಂತರಗಳಿಂದ ರಿಲೀಸ್​ ಡೇಟ್​ ಪೋಸ್ಟ್​​​ ಪೋನ್​ ಆಗಿದೆ.

  • ಕೆಲಸ ಮುಗಿದಿಲ್ಲ.. ಸದ್ಯ ರಿಲೀಸ್​ ಇಲ್ಲ.. ಮಾರ್ಟಿನ್​ ಲೇಟ್​
  • ಅಜ್ಜಿಯ ಅಗಲಿಕೆಯಿಂದ ಕ್ಲೈಮ್ಯಾಕ್ಸ್ ಶೂಟಿಂಗ್ ತಡ..!

ನಿರ್ದೇಶಕ ಎ.ಪಿ ಅರ್ಜುನ್​, ಧ್ರುವ ಸರ್ಜಾ ಹಿಟ್​​ ಕಾಂಬಿನೇಷನ್​​ಗೆ ಈಗಾಗ್ಲೇ ಚಿತ್ರರಸಿಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಇದೀಗ ಇವರಿಬ್ರ ಜುಗಲ್ಬಂದಿಯಲ್ಲಿ ಮಾರ್ಟಿನ್​ ಸಿನಿಮಾ ಸಿಲ್ವರ್​​ ಸ್ಕ್ರೀನ್ ಮೇಲೆ ಅಬ್ಬರಿಸಲಿದೆ. ಸಿನಿಮಾದ ಕ್ಲೈಮ್ಯಾಕ್ಸ್​ ಭರ್ಜರಿ ಸೀನ್​ ಬಾಕಿ ಉಳಿಸಿಕೊಂಡಿದ್ದ ಮಾರ್ಟಿನ್​​ ಟೀಮ್​ಗೆ ಶೂಟಿಂಗ್​​​ ಲೇಟ್​ ಆಗಿದೆ. ಅರ್ಜುನ್​ ಸರ್ಜಾ ತಾಯಿ, ಹಾಗೂ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಆರೋಗ್ಯದಲ್ಲಿ ಏರುಪೇರಾದಾಗ ಧ್ರುವ ಆತಂಕದಲ್ಲಿದ್ದರಂತೆ. ಆ ಸಮಯದಲ್ಲೂ ಸರಿಯಾಗಿ ಶೂಟಿಂಗ್​​ ನಡೆದಿರಲಿಲ್ಲ. ನಂತ್ರ ಅಜ್ಜಿ  ಅಗಲಿಕೆಯ ನಂತ್ರ 10 ರಿಂದ 12 ದಿನ ಲೇಟ್​ ಆಯ್ತಂತೆ. ಹಾಗಾಗಿಯೇ ಸಿನಿಮಾ ರಿಲೀಸ್​ ಡೇಟ್​ ಪೋಸ್ಟ್​ಪೋನ್ ಆಗ್ತಿದೆ.

ಕ್ಲೈಮ್ಯಾಕ್ಸ್​ ಶೂಟಿಂಗ್​ 15 ದಿನಗಳ ಕಾಲ ನಡೆಯಲಿದ್ದು, ಚೇಸಿಂಗ್​ ದೃಶ್ಯಗಳು ಸೇರಿ ಫೈಟಿಂಗ್​ ಸೀನ್​ಗಳಿವೆ. ಒಂದು ಸೆಟ್​​ ಸಾಂಗ್​ ಸೇರಿ ವಿದೇಶದಲ್ಲೂ ಸಾಂಗ್​ ಶೂಟಿಂಗ್​ ಬಾಕಿ ಇದೆಯಂತೆ. ಹಾಗಾಗಿ ಸಿನಿಮಾ ರಿಲೀಸ್​ ಡೇಟ್​ನ ಸದ್ಯದಲ್ಲಿ ತಿಳಿಸ್ತೀವಿ ಎಂದಿದ್ದಾರೆ ನಿರ್ದೇಶಕ ಎ.ಪಿ ಅರ್ಜುನ್​. ಈಗಾಗ್ಲೇ ಗಾಳಿಪಟ ಚಿತ್ರದ ಹಾಟ್​ ಬೆಡಿಗೆ ವೈಭವಿ ಶಾಂಡಿಲ್ಯ ಆ್ಯಕ್ಷನ್​ ಪ್ರಿನ್ಸ್​ಗೆ ನಾಯಕಿಯಾಗಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರಲಿರೋ ಮಾರ್ಟಿನ್​ ಕಾಶ್ಮೀರದ ಕಣಿವೆಗಳಲ್ಲಿ ಐಸ್​ ವಾರ್​ ದೃಶ್ಯಗಳನ್ನು ಚಿತ್ರಿಕರಿಸಿದೆ.

ಮಾರ್ಟಿನ್​ ಚಿತ್ರಕ್ಕೆ ಟಾಲಿವುಡ್​ ಫೇಮಸ್​ ಮ್ಯೂಸಿಕ್​ ಕಂಪೋಸರ್​ ಮಣಿಶರ್ಮಾ ಸಂಗೀತವಿದೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ, ಮಹೇಶ್​ ರೆಡ್ಡಿ ಸಂಕಲನದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲಿದೆ. ವಾಸವಿ ಎಂಟರ್​​ಪ್ರೈಸಸ್​​​ ಬ್ಯಾನರ್​ನಲ್ಲಿ ಉದಯ್​ ಕೆ ಮೆಹ್ತಾ ನಿರ್ಮಾಣದಲ್ಲಿ ಸಿನಿಮಾ ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಅಬ್ಬರಿಸಲಿದೆ. ಆದ್ರೆ ಸಿನಿಮಾ ರಿಲೀಸ್​ ಡೇಟ್​​ ಲೇಟ್​ ಆಗಿರೋದ್ರಿಂದ ಅಭಿಮಾನಿಗಳು ಮತ್ತಷ್ಟು ದಿನ ಚಾತಕ ಪಕ್ಷಿಗಳಂತೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES