FBನಲ್ಲಿ ಲವ್ ಮಾಡಿ ಹೆಣ್ಣನ್ನು ಪರಲೋಕಕ್ಕೆ ಕಳಿಸಿದ ಕಿರಾತಕ

ಕಲಬುರಗಿ : ಜಸ್ಮೀನಾ  ಉತ್ತರ ಭಾರತದ ಅಸ್ಸಾಂನಲ್ಲಿ ತನ್ನ ಇಬ್ಬರು ಮಕ್ಕಳ‌ ಜೊತೆ ಸುಖವಾಗಿ ಸಂಸಾರ ನಡೆಸುತ್ತಿದ್ದಳು. ಆದರೆ, ಫೇಸ್ ಬುಕ್‌ ಮೂಲಕ ಬಿಹಾರದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕನ ಪರಿಚಯವಾಗಿ ನಂತರ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು. ಆದರೆ ಒಂದೂವರೆ ವರ್ಷದ ಹಿಂದೆ ಇಬ್ಬರೂ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಆಗಮಿಸಿ ಒಂದು ತಿಂಗಳ ಸಂಸಾರ ಸಹ ನಡೆಸಿದ್ದರು. ಬಳಿಕ ಮದ್ವೆಯಾಗು ಅಂತಾ ಜಸ್ಮಿನಾ ಎಷ್ಟೇ ಒತ್ತಾಯ ಮಾಡಿದ್ರೂ ಜುಲ್ಫಿಕರ್ ಮಾತ್ರ ಮದುವೆಯಾಗಲು ನಿರಾಕರಿಸುತ್ತಾನೆ ಬಂದಿದ್ದನು‌‌. ಕಳೆದ ವರ್ಷ ಏಪ್ರಿಲ್ 5 ರಂದು ಪೋಲಕಪಳ್ಳಿ ಬಳಿ ಜಸ್ಮಿನಾಳನ್ನು ಕರೆದೊಯ್ದ ಮಹ್ಮದ್ ಜುಲ್ಫಿಕರ್, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದಾನೆ.

ಇನ್ನೂ ಜಸ್ಮಿನಾಳ ಮೃತದೇಹ ಯಾರದೆಂಬುದು ಪೊಲೀಸರಿಗೆ ತಿಳಿದಿರಲಿಲ್ಲ. ಹೀಗಾಗಿ ಚಿಂಚೋಳಿ ಮತ್ತು ತೆಲಂಗಾಣದ ಗಡಿ ಪೊಲೀಸ್ ಠಾಣೆಗಳಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಲೀಸ್ಟ್‌ ಪರಿಶೀಲಿಸಿದಾಗ ಯಾವುದೇ ದೂರು ಬಂದಿರುವುದಿಲ್ಲ. ಬಳಿಕ ಹೇಗೋ ಜಸ್ಮಿನಾಳ ಮೊಬೈಲ್‌ ನಂಬರ್ ಪಡೆದು ಕಾಲ್ ಲಿಸ್ಟ್ ತೆಗೆದಾಗ ಮಹ್ಮದ್ ಜುಲ್ಫಿಕರ್‌ನ ಕೃತ್ಯ ಬಯಲಾಗಿದೆ.

ಅದೆನೇ ಇರಲಿ ಪ್ರೀತಿಗೆ ಕಣ್ಣಿಲ್ಲ. ಪ್ರೀತಿ ಎನ್ನೋದು ಕುರುಡು ಅನ್ನೋ ಮಾತಿನಂತೆ ಗೊತ್ತೂ ಗುರಿಯಿಲ್ಲದ ವ್ಯಕ್ತಿಯ ಜೊತೆ ಸ್ನೇಹ ಮಾಡಿ ಪ್ರೀತಿಸಿ ಗಂಡ ಮಕ್ಕಳನ್ನೂ ಬಿಟ್ಟು ಬಂದು ಜಸ್ಮಿನಾ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES