ಭ್ರಷ್ಟ ಜನ ವಿರೋಧಿ ಸರ್ಕಾರವನ್ನು ನಾವು ತಡೆಯುತ್ತೇವೆ : ಡಿಕೆ ಶಿವ​ಕುಮಾರ್​

ಬೆಂಗಳೂರು : ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಹೆಚ್​​​.ಡಿ ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗೌರವ ಸ್ವಾಭಿಮಾನಕ್ಕಾಗಿ ನಾವು ಕಾರ್ಯಕ್ರಮ ಮಾಡ್ತಿದ್ದೇವೆ. ಜಿಲ್ಲೆಗೆ ಪ್ರತಿ ಕ್ಷೇತ್ರಕ್ಕೆ ೭೫ ಕಿಲೊ ಮೀಟರ್ ಪಾದಯಾತ್ರೆ ಮಾಡ್ತಿದ್ದೇವೆ. ನಿನ್ನೆಯಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಓಡಾಡ್ತಿದ್ದೇನೆ. ಕಾರ್ಪೋರೇಷನ್ ಇಲೆಕ್ಷನ್ ಮುಂದಕ್ಕೆ ಹಾಕಲು ಮಾಡ್ತಿದ್ದಾರೆ. ಆಡಿದ್ದೇ ಆಟ ಆಗ್ತಿದೆ, ಹೇಳೋರಿಲ್ಲ ಕೇಳೋರಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡ್ತಿದ್ದಾರೆ. ಭ್ರಷ್ಟ ಜನ ವಿರೋಧಿ ಸರ್ಕಾರವನ್ನು ನಾವು ತಡೆಯುತ್ತೇವೆ ಎಂದರು.

ಅದಲ್ಲದೆ, ೧೫ ರಂದು ಇತಿಹಾಸ ಸೃಷ್ಟಿ ಆಗ್ತದೆ. ಇನ್ನು ಮಿನಿಸ್ಟರ್ ಕೈಗೆ ವರದಿ ಸಿಕ್ಕಿಲ್ಲ. ಪವರ್ ಟಿವಿ ವರದಿಯ ಬೆನ್ನಲೇ ಸಚಿವ ವರದಿ ಕೇಳಿದ್ದಾರೆ. ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಸದ್ಯ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿದೇಶ ಪ್ರವಾಸ ಈ ಹಿನ್ನಲೆಯಲ್ಲಿ ೨೮ ಕ್ಕೆ ಪ್ರಧಾನ ಕಾರ್ಯದರ್ಶಿ ವರದಿ ಕೊಡಬೇಕಿತ್ತು. ಆದ್ರೆ ಮಿನಿಸ್ಟರ್ ಅದೇಶ ಮಾಡಿದ್ರು ಇನ್ನು ವರದಿಯನ್ನ ನೀಡದ ಅಧಿಕಾರಿಗಳು, ಇನ್ನು ಮಿನಿಸ್ಟರ್ ಕತ್ತಿ ಸಾಹೇಬ್ರ್ ಇಲಾಖೆ ಮೇಲೆ ಇರೋ ಹಿಡಿತವಾ..? ಎಂದು ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES