Site icon PowerTV

ಡಿಸಿಗಳ ಖಾತೆಯಲ್ಲಿ 800 ಕೋಟಿ ಹಣ ಇಡಲಾಗಿದೆ : ಆರ್ ಆಶೋಕ್

ರಾಮನಗರ : ಮಳೆಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಆಶೋಕ್ ಭೇಟಿ ಮಾಡಿ ಮನೆ ಹಾನಿ ಕುಟುಂಬಗಳಿಗೆ ಚೆಕ್ ವಿತರಣೆ ಮಾಡಿದ್ದಾರೆ.

ತಾಮಸಂದ್ರ ಬಳಿ ಸೇತುವೆ ವೀಕ್ಷಣೆ ‌ಮಾಡಿದ ಸಚಿವ ಆರ್ ಆಶೋಕ್, ಮಳೆಹಾನಿ ಪ್ರದೇಶಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದು, ಇದೇ ವೇಳೆ ಮನೆ ಹಾನಿ ಕುಟುಂಬಗಳಿಗೆ ಚೆಕ್ ವಿತರಣೆಯನ್ನು ಮಾಡಿದ್ದಾರೆ.
ಇನ್ನು, ರಾಜ್ಯದಲ್ಲಿ ಹಿಂದೇದೂ ಕಾಣದ ರೀತಿಯಲ್ಲಿ ಮಳೆಯಾಗುತ್ತಿದೆ. ಅಧಿಕ‌ ಪ್ರಮಾಣದಲ್ಲಿ ಮಳೆ ಬಂದಿದೆ. ಮಲೆನಾಡು ಭಾಗದಲ್ಲಿ ಕುಸಿತ ಸಂಭವಿಸಿದೆ. ಹಳೇ ಮೈಸೂರು ಭಾಗದಲ್ಲಿ ಕೆರೆಗಳು ತುಂಬಿವೆ. ರೈತರಿಗೆ ಅನುಕೂಲವಾಗಿದೆ. ಸಾಕಷ್ಟು ಅನುಹುತ ಕೂಡ ಸಂಭವಿಸಿದೆ. ಸುಮಾರು 60 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಇದೆ ಎಂದರು.

ಅದಲ್ಲದೇ, ಸರ್ಕಾರ ಜನರ ಜೊತೆ ನಿಲ್ಲುತ್ತದೆ. ಹಣದ ಕೊರತೆ ಇಲ್ಲ. ಎಲ್ಲಾ ಡಿಸಿಗಳ ಖಾತೆಯಲ್ಲಿ 800 ಕೋಟಿ ಹಣ ಇಡಲಾಗಿದೆ. ನಾಳೆ ಮತ್ತಷ್ಟು ಹಣ ಬಿಡುಗಡೆ ‌ಮಾಡುತ್ತೇವೆ. ಅಧಿಕಾರಿಗಳಿಗೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಪ್ರವಾಸ ಮಾಡುತ್ತಿದ್ದೇನೆ. ಪರಿಹಾರವನ್ನ 24 ಗಂಟೆ ಒಳಗೆ ಕೊಡುವಂತೆ ಮಾಡಿದ್ದೇನೆ. ನಾಳೆ ಐನೂರು ಕೋಟಿ ಹಣ ಬಿಡುಗಡೆ ‌ಮಾಡಲಾಗುತ್ತದೆ ಎಂದರು,

Exit mobile version