Site icon PowerTV

ಉತ್ತರಕನ್ನಡ ಜಿಲ್ಲೆಯಲ್ಲಿ ರೆಡ್ ಅರ್ಲಟ್ ಘೋಷಣೆ

ಕಾರವಾರ : ರಾಜ್ಯದೆಲ್ಲೆಡೆ ಆಶ್ಲೇಷ ಮಳೆಯ ಅಬ್ಬರ ಜೋರಾಗಿದ್ದು, ಅನೇಕ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ಆಗಷ್ಟ 6ರ ತನಕ ಜಿಲ್ಲೆಯಲ್ಲಿ ರೆಡ್ ಅರ್ಲಟ್ ಘೋಷಣೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಭಟ್ಕಳದಲ್ಲಿ ಪ್ರವಾಹ ಸೃಷ್ಟಿಸಿ ಹೋಗಿದ್ದು,ಇನ್ನೂ ಕರಾವಳಿ ಭಾಗದಲ್ಲೂ ವರುಣರ್ಭಟ ಜೋರಾಗಿದೆ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ದಟ್ಟವಾಗಿರುವ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗದಂತೆ ಮೀನುಗಾರಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಮೇಲೆ ವರುಣ ವಕ್ರದೃಷ್ಟಿ ಬೀರಿದ್ದು, ಇನ್ನೂ ಕೆಲದಿನಗಳ ಕಾಲ ಮಳೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಕಡಲತೀರ ಹಾಗೂ ಫಾಲ್ಸ್ ಗಳಿಗೆ ಹೋಗದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

Exit mobile version