Site icon PowerTV

ರಸ್ತೆ ಮೇಲೆ ಟೊಮೆಟೋ ಸುರಿದು ರೈತರ ಆಕ್ರೋಶ

ಗದಗ : ರಸ್ತೆ ಮೇಲೆ ಟೊಮೆಟೋ ಸುರಿದು ರೈತರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಟೊಮೆಟೋ ದರ ಕುಸಿತ ಕಂಡ ಹಿನ್ನೆಲೆ ರಸ್ತೆ ಮೇಲೆ ಸುರಿದು ಪ್ರತಿಭಟನೆ ಮಾಡಿದ್ದು, ಹರಾಜು ಪ್ರಕ್ರಿಯೆಯಲ್ಲಿ ಒಂದು ಬಾಕ್ಸ್ ಗೆ ಕೇವಲ 30 ರೂ ನಂತೆ ದರ ನಿಗದಿಪಡಿಸಿದ ಖರೀದಿದಾರರು, 25 ಕೆಜಿ ಟೊಮೆಟೋ ಬಾಕ್ಸ್ ಒಂದಕ್ಕೆ ಕೇವಲ 30 ರೂ ದರದಂತೆ ಖರೀದಿ ಮಾಡಿದ್ದಾರೆ.

ಇನ್ನು, ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೋಗೆ 20 ರೂ ದಂತೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಕಷ್ಟಪಟ್ಟು ಬೆಳೆದ ರೈತರಿಂದ ನಷ್ಟದ ಬೆಲೆಯಲ್ಲಿ ಟೊಮೆಟೋ ಖರೀದಿ ಮಾಡಿದ್ದಾರೆ. ಹೀಗಾಗಿ ಆಕ್ರೋಶಗೊಂಡ ರೈತರಿಂದ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version