Site icon PowerTV

ಶಿಕ್ಷಕರ ಬೀಳ್ಕೊಡುಗೆ: ವಿದ್ಯಾರ್ಥಿನಿಯರ ಕಣ್ಣೀರು

ತುಮಕೂರು : ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ ಅವಿನಾಭಾವವಾದದ್ದು. ಹೀಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಶಿಕ್ಷಕರನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಘಟನೆಯೊಂದು ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಪಾತ್ರವಾಗಿದ್ದ ಕನ್ನಡ ಶಿಕ್ಷಕರು ಎಂದರೆ ಡಾ.ಎಸ್.ಕೃಷ್ಣಪ್ಪ. ಇವರು ಗುಬ್ಬಿ ತಾಲೂಕಿನ ಅಂಕಸಂದ್ರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಹೊಂದಿದ್ದಾರೆ. ನಗರದ ಎಂಪ್ರೆಸ್ ಶಾಲೆಯಲ್ಲಿ ನಿರಂತರ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗಷ್ಟೇ ಹಂಪಿ ವಿವಿಯಿಂದ PhD ಪದವಿ ಪಡೆದಿದ್ದರು. ಶಿಕ್ಷಕ ವೃತ್ತಿ ಇಲಾಖೆಯಲ್ಲಿ ಕೃಷ್ಣಪ್ಪನವರು ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕ ಎಂದು ಗುರುತಿಸಿಕೊಂಡಿದ್ದರು. ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಿಕ್ಷಕರನ್ನು ಹೋಗಬೇಡಿ ಸರ್ ಎಂದು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತರು. ವಿದ್ಯಾರ್ಥಿನಿಯರ ಜೊತೆ ಶಾಲೆಯ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿದ್ದಾರೆ.

Exit mobile version