Site icon PowerTV

ಚಿನ್ನಕ್ಕೆ ಮುತ್ತಿಟ್ಟ ಟೇಬಲ್ ಟೆನ್ನಿಸ್ ತಂಡ

ಬರ್ಮಿಂಗ್​ಹ್ಯಾಮ್ ಕಾಮನ್​ವೆಲ್ತ್​ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ನಿನ್ನೆ ನಡೆದ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ 3-0 ಅಂತರದ ಜಯದೊಂದಿಗೆ ಸಿಂಗಾಪುರವನ್ನು 3-1 ಅಂತರದಿಂದ ಸೋಲಿಸಿ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.

2018ರ ಗೋಲ್ಡ್ ಕೋಸ್ಟ್ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಚಿನ್ನ ಗೆದ್ದುಕೊಂಡಿತ್ತು. ಇದೀಗ ಈ ಬಾರಿ ಕೂಡ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷ ಎಂದರೆ 2018ರಂತೆಯೇ ಈ ಬಾರಿಯೂ ಭಾರತ ತಂಡದಲ್ಲಿ ಅಚಂತಾ ಶರತ್ ಕಮಲ್, ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಕಣಕ್ಕಿಳಿದಿದ್ದರು. ಅಂದರೆ ನಾಲ್ಕು ವರ್ಷಗಳ ಹಿಂದೆ ಆಡಿದ ಆಟಗಾರರೇ ಇದೀಗ ಮತ್ತೊಮ್ಮೆ ಭಾರತಕ್ಕೆ ಪದಕವನ್ನು ತಂದುಕೊಟ್ಟಿದ್ದಾರೆ.

Exit mobile version