Site icon PowerTV

ಪಾರ್ಟಿ ಕೊಡಿಸು ಅಂತಾ ಕಿರಿಕ್​ ಮಾಡಿದ್ದಕ್ಕೆ ಹತ್ಯೆ

ಶಿವಮೊಗ್ಗ : ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ಮತ್ತೊಬ್ಬ ರೌಡಿ ಶೀಟರ್ ನ ನೆತ್ತರು ಹರಿದಿದೆ. ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಮರ್ಡರ್ ಆಗಿದ್ದು, ನಗರದ ನಂಜಪ್ಪ ಲೈಫ್​ ಕೇರ್​ ಬಳಿ ಮುಂಭಾಗದ ಗಂಧರ್ವ ಬಾರ್​ ಸಮೀಪ ಈ ಕೊಲೆ ನಡೆದಿದೆ. ಕಿರಣ್​ ಕುಮಾರ್​ ಅಲಿಯಾಸ್ ಹುಚ್ಚ ಕಿರಣ ಎಂಬಾತನನ್ನ ಕೊಲೆ ಮಾಡಲಾಗಿದೆ. ಈತನನ್ನು ಹಳೇ ರೌಡಿ ಮುನಿರಾಜು ಮಗ ಎನ್ನಲಾಗುತ್ತಿದೆ.

ವಿದ್ಯಾರ್ಥಿಯೊಬ್ಬನಿಗೆ ಪಾರ್ಟಿ ಕೊಡಿಸು ಎಂದು ಕಿರಿಕ್ ಮಾಡಿದ್ದಕ್ಕೆ ಆ ವಿದ್ಯಾರ್ಥಿಯೇ ಈತನ ಕಿರುಕುಳ ತಡೆಯಲಾಗದೇ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಹಳ ದಿನಗಳಿಂದ ಪಾರ್ಟಿ ಕೊಡಿಸು ಎಂದು ಪೀಡಿಸುತ್ತಿದ್ದುದ್ದಕ್ಕೆ ಈ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ. ಮೊದಲು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಅಷ್ಟೇ ಅಲ್ಲ ಕೊಲೆ ನಡೆಸಿದ ಬಳಿಕ ವಿದ್ಯಾರ್ಥಿ ವಿನೋಬ ನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದು, ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Exit mobile version