Site icon PowerTV

ಬದಲಾದ ಬಿಸಿಯೂಟದ ಮೆನು

ಬೆಂಗಳೂರು : ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆಯಡಿ ಶಾಲೆಗಳ ಮಧ್ಯಾಹ್ನ ಊಟದ ಮೆನು ಸಿದ್ಧಪಡಿಸಿದೆ. ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ. ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ ಲಭ್ಯವಾಗಲಿದೆ. ಪ್ರತಿ ದಿನ ಮಧ್ಯಾಹ್ನ ಮಕ್ಕಳಿಗೆ ಒಂದೇ ರೀತಿಯ ಆಹಾರ ನೀಡೋದರಿಂದ ಅಪೌಷ್ಟಿಕತೆ ಹೆಚ್ಚಾಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು ಸಿದ್ಧವಾಗಿದೆ.

ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಷ್ಕೃತ ಮೆನು ಸಿದ್ಧಪಡಿಸಿದೆ. ಈ ಮೆನು ಆಧರಿಸಿ ಶಾಲೆಗಳು ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂದು ಹೇಳಿದೆ. ಸೋಮವಾರ: ಅನ್ನ, ಸಾಂಬಾರು. ಮಂಗಳವಾರ: ಪಲಾವ್‌ ಅಥವಾ ಟೊಮೆಟೊ ಬಾತ್‌ ಹಾಗೂ ತರಕಾರಿ ಪಲ್ಯ. ಬುಧವಾರ: ಅನ್ನ, ರಸಂ ಮತ್ತು ಕಾಳು ಪಲ್ಯ ಅಥವಾ ತರಕಾರಿ ಪಲ್ಯ. ಗುರುವಾರ: ಅನ್ನ, ಸಾಂಬಾರು. ಶುಕ್ರವಾರ: -ಬಿಸಿ ಬೇಳೆ ಬಾತ್‌.ಶನಿವಾರ: ಉಪ್ಪಿಟ್ಟು ಅಥವಾ ಚಪಾತಿ ಮತ್ತು ಪಲ್ಯ ಇರಲಿದೆ.

Exit mobile version