Site icon PowerTV

ಒಟಿಟಿಯಲ್ಲೂ ಇರಲಿದೆ ಕಿಚ್ಚನ ಮಸ್ತ್ ವೀಕೆಂಡ್ ಧಮಾಕ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೂಟು ಬೂಟು ತೊಟ್ಟು ಹೌದು ಸ್ವಾಮಿ ಅಂತ ಮತ್ತೆ ಬರ್ತಿದ್ದಾರೆ. ಒಂಟಿ ಮನೇಲಿ ನಡೆಯೋ ತರಲೆ, ತಮಾಷೆ, ಜಗಳ, ಆಟ ಎಲ್ಲವೂ ಈ ಬಾರಿ ಡಬಲ್ ಆಗಲಿದೆ. ಯೆಸ್.. ಈ ಬಾರಿ ಬಿಗ್ ಬಾಸ್ ಒಟಿಟಿ ಸೀಸನ್ ಒನ್​​​​​ ಬರ್ತಿದೆ. ಅರೇ ಏನಿದು..? ಒಟಿಟಿ ಬಿಗ್ ಬಾಸ್ ಹೇಗಿರುತ್ತೆ..? ಯಾರೆಲ್ಲಾ ಭಾಗವಹಿಸ್ತಾರೆ ಅನ್ನೋದನ್ನ ತಿಳಿಬೇಕಾ..? ನೀವೇ ಓದಿ.

ಕನ್ನಡದ  ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ನಂಬರ್ ಒನ್ ಸ್ಥಾನದಲ್ಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಸತತವಾಗಿ 8 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜನಪ್ರಿಯ ಶೋ ಇದು. ಪ್ರತಿ ಬಾರಿಯೂ ಹೊಸ ಹೊಸ ಸ್ಪರ್ಧಿಗಳೊಂದಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುತ್ತಿರುವ ಮನೆ ಮನೆಯ ಶೋ ಬಿಗ್ ಬಾಸ್. ಆದ್ರೆ, ಈ ಬಾರಿ ಬಿಗ್ ಬಾಸ್ ಅಭಿಮಾನಿಗಳಿಗೆ ಡಬಲ್ ಖುಷಿ, ಡಬಲ್ ಧಮಾಕ. ಓಟಿಟಿ ಮತ್ತು ಟಿವಿ ಸೇರಿ ಎರಡು ಬಿಗ್ ಬಾಸ್ ಪ್ರಸಾರವಾಗಲಿದೆ.

ಸದ್ಯ, ಓಟಿಟಿ ಸೀಸನ್ 1 ವೂಟ್ ನಲ್ಲಿ ಪ್ರಸಾರವಾಗಲಿದೆ. 1000 ಗಂಟೆಗಳ ಕಾಲ ನಾನ್ ಸ್ಟಾಪ್ ಲೈವ್ ಪ್ರಸಾರವಾಗೋ ಭರ್ಜರಿ ಆಫರ್ ನೀಡಿದೆ ಬಿಗ್ ಬಾಸ್ ಟೀಮ್. 42 ದಿನಗಳ ಕಾಲ 16 ಸ್ಪರ್ಧಿಗಳೊಂದಿಗೆ ಗೆಲುವಿನ ಸೆಣಸಾಟ ನಡೆಯಲಿದೆ. ಇಲ್ಲಿ‌ ಗೆದ್ದ ಕೆಲವರಿಗೆ ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸೋ‌ ಬಂಪರ್ ಆಫರ್ ಕೂಡ ಸಿಗಲಿದೆ. ಯೆಸ್.. ಇಲ್ಲಿ ವಿನ್ನರ್ಸ್ ಇರ್ತಾರೆ ಆದ್ರೆ, ವಿನ್ನರ್ ಇರೋದಿಲ್ಲ. ಟಿವಿಯಲ್ಲಿ 100 ದಿನಗಳ ಕಾಲ ಪ್ರಸಾರವಾಗೋ ಬಿಗ್ ಬಾಸ್​​​​ಗೆ ಇದು ಆಡೀಷನ್ ಸ್ಟೇಜ್ ರೀತಿ ಮೂಡಿ ಬರಲಿದೆ.

ಈಗಾಗ್ಲೇ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಯಶ ಕಂಡಿರುವ ಓಟಿಟಿ ಬಿಗ್ ಬಾಸ್ ಕನ್ನಡಕ್ಕೂ ದಾಪುಗಾಲು ಇಟ್ಟಿದೆ. ಇಲ್ಲಿ ಕೂಡ ವೀಕೆಂಡ್ ಗೆ ಕಿಚ್ಚ ಸುದೀಪ್‌ ಕಟ್ಟೆ ಪಂಚಾಯಿತಿ ನಡೆಸಲಿದ್ದಾರೆ. ಆಗಸ್ಟ್ 06 ಹಾಗೂ 7 ರಂದು ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಇರಲಿದ್ದು, ವೀಕ್ಷಕರ ಪಾಲಿಗೆ ಹೊಸ ಅನುಭವ ಕೊಡಲಿದೆ. ಓಟಿಟಿ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲಕ್ಕೆ ಕ್ಷಣಗಣನೆ ಶುರುವಾಗಿದೆ. ಮನೆಯ ರೂಪೂರೇಷೆ, ಆಟಗಳ ವಿನ್ಯಾಸ ಎಲ್ಲವೂ ಡಿಫರೆಂಟ್ ಆಗಿರಲಿದೆ.

ಓಟಿಟಿ ಅಂದಾಕ್ಷಣ ಎಲ್ಲರಿಗೂ ಸಹಜವಾಗಿ ಬಿಗ್ ಬಾಸ್ ಮನೆಯ ಮೇಲೆ ಕುತೂಹಲ ದುಪ್ಪಟ್ಟಾಗಿದೆ. ಕಾಂಟ್ರವರ್ಸಿ ಕ್ರಿಯೇಟ್​​ ಮಾಡೋ ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ಆನ್ಸರ್​​​​​ ಕೇಳುವ ತವಕ ಪ್ರೇಕ್ಷಕರಲ್ಲೂ ಇದೆ. ಒಟ್ಟಾರೆ ರಾಜಕೀಯ, ಸಿನಿಮಾ, ಸೋಶಿಯಲ್ ಮೀಡಿಯಾ, ಸಾಹಿತ್ಯ, ಹೀಗೆ ನಾನಾ ರಂಗದಲ್ಲಿ ಹೆಸ್ರು ಮಾಡಿರೋ ಜನಪ್ರಿಯ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗ್ತಿದೆ. OTT ಬಿಗ್ ಬಾಸ್ ಗೆ ಜನಸಾಮಾನ್ಯ ನಿಗೆ ಅವಕಾಶ ಇರುತ್ತಾ ಇಲ್ವಾ ಅನ್ನೋದು ಸಸ್ಪೆನ್ಸ್ ಆಗಿದೆ.

ಬಿಗ್ ಬಾಸ್ ಮನೆಗೆ ಹೋಗಲು ಎಲ್ಲರೂ ಸಿಕ್ಕಾಪಟ್ಟೆ ಕಸರತ್ತು‌ ನಡೆಸ್ತಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ಬಿಗ್ ಬಾಸ್ ಹತ್ತಿರ ಬರ್ತಿದ್ದಂತೆ ತಮ್ಮ ಗಮನ ಸೆಳೆಯಲು ಏನೇನೋ ಕ್ರಿಯೇಟಿವ್ ತಂತ್ರಗಳನ್ನು ಮಾಡುತ್ತಿದ್ದಾರೆ.ಆದ್ರೆ, ಬಿಗ್ ಬಾಸ್ ಕಣ್ಣು ಯಾರ ಮೇಲಿದೆ..? ಯಾರಿಗೆ ಬಲೆ‌ ಹಾಕಿದೆ ಅನ್ನೋ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

Exit mobile version