Site icon PowerTV

ಡಿ.ಕೆ ಬ್ರದರ್ಸ್ ಜೊತೆ ಆಟ ಆಡಿದಂತೆ ನನ್ನ ಜೊತೆ ಆಟ ಆಡಬೇಡಿ : ಅಶ್ವಥ್ ನಾರಾಯಣ್

ಬೆಂಗಳೂರು : ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಇಂದು ರಾಮ ನಗರದಲ್ಲಿ ಡಿ.ಕೆ ಬ್ರದರ್ಸ್ ಜೊತೆ ಆಟ ಆಡಿದಂತೆ ನನ್ನ ಜೊತೆ ಆಟ ಆಡಲು ಬರಬೇಡಿ. ನಮ್ಮ ಬಳಿ ನಿಮ್ಮ ಆಟ ನಡೆಯೋದಿಲ್ಲ. ನಾಲಿಗೆ ಮೇಲೆ ಬಿಗಿ ಇರಲಿ ಅಂತ ಮಾಜಿ ಸಿಎಂ ಹೆಚ್‌ಡಿಕೆ, ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿ ಕಾರಿದ್ದಾರೆ.

ಕುಮಾರಸ್ವಾಮಿಗೆ ಅರಳು ಮರುಳೋ ಅನ್ನುವ ಹಾಗೆ ಆಗಿದೆ. ಅಧಿಕಾರ ಇದ್ದಾಗ ಭೂಮಿ ಮೇಲೆ‌ ನಡೆಯದೆ ಪಂಚತಾರಾ ಹೊಟೇಲ್‌ನಲ್ಲೇ ಕಾಲ ಕಳೆದರು‌. ಈ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅಮಿತ್‌ ಶಾ ಪ್ರವಾಸದ ಬಗ್ಗೆ ಅವರ ಹೇಳಿಕೆಯನ್ನ ಖಂಡಿಸುತ್ತೇವೆ. ಕುಮಾರಸ್ವಾಮಿ ಅಸ್ತಿತ್ವ‌ದಲ್ಲೇ ಇಲ್ಲ.ಅವರ ಜೊತೆ ಹೇಗೆ ಆಟ ಆಡಲಿ. ಕುಮಾರಸ್ವಾಮಿ ಪಿಚ್‌ನಲ್ಲೇ ಇಲ್ಲ, ಔಟ್ ಆಗಿದ್ದಾರೆ. ಆಟಕ್ಕೆ ಬರಲು ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದ್ದಾರೆ.

Exit mobile version