Site icon PowerTV

ಸಿದ್ದರಾಮೋತ್ಸವಕ್ಕೆ ಮಳೆಯ ಕಾಟ..?

ದಾವಣಿಗೆರೆ : ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ಅದ್ದೂರಿ ಉತ್ಸವಕ್ಕೆ ವರುಣ ತಣ್ಣೀರೆರೆಚ್ಚುವ ಸಾಧ್ಯತೆ ಇದೆ.

ನಗರದಲ್ಲಿ, ಜೋಶ್​ನಲ್ಲಿರೋ ಟಗರು ಅಭಿಮಾನಿಗಳಿಗೆ ವರುಣಾಘಾತ ಉಂಟಾಗಿದ್ದು, ದಾವಣಗೆರೆಯಲ್ಲಿ ಇನ್ನೂ 10 ದಿನ ಭಾರೀ ಮಳೆ ಸಾಧ್ಯತೆ ಇರಲಿದೆ. ಹೀಗಾಗಿ ಸಿದ್ದು ಉತ್ಸವಕ್ಕೆ ಬರುವ ಮುನ್ನ ಪೂರ್ವ ತಯಾರಿ ನಡೆಸಲಾಗಿದೆ.

ಇನ್ನು, ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ತಿರೋ ಸಿದ್ದರಾಮಯ್ಯ, ಜಾತ್ರೆ ತರಹ ಅಚರಿಸುತ್ತಿರೋ ಕಾರ್ಯಕ್ರಮಕ್ಕೆ ಮಳೆ ರಗಳೆ ಉಂಡಾಗಿದ್ದು, ಮಳೆ ಬಗ್ಗೆ ಆಯೋಜಕರರು‌ ಎಚ್ಚೆತ್ತುಕೊಳ್ತಾರಾ..? ದಾವಣಗೆರೆ ಬಿಟ್ಟು ಬೇರೆಡೆ ಸಮಾರಂಭ ಆಯೋಜಿಸ್ತಾರಾ..? ಎಂದು ಕಾದುನೋಡಬೇಕು.

Exit mobile version