Site icon PowerTV

ಬದಲಾಯ್ತು ಮೋದಿ ಪ್ರೊಫೈಲ್ ಚಿತ್ರ

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶವ್ಯಾಪಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿಯೂ ಪ್ರಧಾನಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು. ‘ಸಾಮಾಜಿಕ ಮಾಧ್ಯಮಗಳಲ್ಲಿಯೂ ದೇಶದ ಹಿರಿಮೆ ಹೆಚ್ಚಿಸುವಂಥ ಪೋಸ್ಟ್ ಹಂಚಿಕೊಳ್ಳಿ’ ಎಂದು ಸಲಹೆ ಮಾಡಿದ್ದರು.

ಇದೀಗ ಸ್ವತಃ ನರೇಂದ್ರ ಮೋದಿ ಅವರೇ ತಮ್ಮ ಟ್ವಿಟರ್ ಮತ್ತು ಫೇಸ್​ಬುಕ್ ಅಕೌಂಟ್​ಗಳಲ್ಲಿ ಪ್ರೊಫೈಲ್ ಇಮೇಜ್ ಬದಲಿಸಿಕೊಂಡು ಉತ್ತಮ ಮಾದರಿಯನ್ನೂ ಹಾಕಿಕೊಂಡಿದ್ದಾರೆ. ‘ಇಂದು ಆಗಸ್ಟ್ 2. ನಮ್ಮ ದೇಶದ ಇತಿಹಾಸದಲ್ಲಿ ವಿಶೇಷ ದಿನ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮದ ಡಿಸ್​ಪ್ಲೇ ಇಮೇಜ್ ಬದಲಿಸಿದ್ದೇನೆ. ನೀವೂ ಹೀಗೆ ಮಾಡಬೇಕು ಎಂದು ಕೋರುತ್ತೇನೆ’ ಎಂದು ನರೇಂದ್ರ ಮೋದಿ ಅವರು ಫೇಸ್​ಬುಕ್ ಪೋಸ್ಟ್​ನಲ್ಲಿ ವಿನಂತಿಸಿದ್ದಾರೆ.

Exit mobile version