Site icon PowerTV

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮೇಘಸ್ಫೋಟ

ಸುಬ್ರಹ್ಮಣ್ಯ : ಇತಿಹಾಸದಲ್ಲೇ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಕಂಡು ಕೇಳರಿಯದ ಭಾರೀ ಮಳೆಗೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳು ಮಳೆಯಿಂದಾಗಿ ತತ್ತರಿಸಿ ಹೋಗಿದೆ.

ಸುಬ್ರಹ್ಮಣ್ಯ, ಬಿಸ್ಲೆ, ಕಲ್ಮಕಾರು, ಬಾಳುಗೋಡು ಪ್ರದೇಶದಲ್ಲಿ ಭಾರೀ ಅನಾಹುತ ಉಂಟಾಗಿದ್ದು, 2018ರ ಜೋಡುಪಾಲ ದುರಂತ ಮಾದರಿಯಲ್ಲೇ ಬೆಟ್ಟ, ಕಾಡುಗಳ ನಡುವೆ ಸ್ಫೋಟಗೊಂಡಿದೆ. ಬೆಟ್ಟದ ನಡುವೆ ಜಲಸ್ಫೋಟ ಉಂಟಾಗಿದ್ದು, ಬೃಹತ್ ಮರಗಳು, ಬಂಡೆ ಕಲ್ಲುಗಳು ಛಿದ್ರ ಛಿದ್ರಗೊಂಡಿದೆ.

ಇನ್ನು, ಮಹಾಮಳೆಗೆ ದರ್ಪಣ ತೀರ್ಥ, ಕುಮಾರಧಾರ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಭಾರೀ ಮಳೆಯಿಂದ ಕುಕ್ಕೆಯ ಆದಿ ಸುಬ್ರಹ್ಮಣ್ಯ ದೇವಸ್ಥಾನ ಮುಳುಗಡೆಯಾಗಿದೆ. 2 ದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರದಂತೆ ದ.ಕ ಜಿಲ್ಲಾಡಳಿತ ಮನವಿ ಮಾಡಿದ್ದಾರೆ. ಅದಲ್ಲದೇ, ದರ್ಪಣ ತೀರ್ಥದ ಅಬ್ಬರಕ್ಕೆ ಮುಳುಗಿದ ಆದಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯದ ಹಲವು ಲಾಡ್ಜ್​ಗಳಿಗೆ ನದಿ ನೀರು ನುಗ್ಗಿದ್ದು, ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ನಾಗರಪಂಚಮಿ ಹಬ್ಬ ಆಚರಿಸಲಾಗುತ್ತಿದ್ದು, ಹೀಗಾಗಿ ಕೇವಲ ಅರ್ಚಕರು ಮತ್ತು ದೇವಸ್ಥಾನ ಸಿಬ್ಬಂದಿಗೆ ಮಾತ್ರ ದೇವಸ್ಧಾನದ ಒಳಗಡೆ ಪ್ರವೇಶವಿದೆ.

Exit mobile version