Site icon PowerTV

ಮಸೂದ್ ಹತ್ಯೆ ಷಡ್ಯಂತ್ರದ ಕೊಲೆ ಅಲ್ಲ : ಶೋಭಾ ಕರಂದ್ಲಾಜೆ

ಬೆಂಗಳೂರು : ಪ್ರವೀಣ್ ಸಾವು ನಮಗೆ ದುಃಖ ತಂದಿದೆ, ಸಮಾಜದಲ್ಲಿ ಅಮಾಯಕರು ಬಲಿಯಾಗ್ತಿದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಪ್ರವೀಣ್ ಚಲನವಲನ ಗೊತ್ತಿದ್ದ ಸ್ಥಳೀಯರು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ನಾನು ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿ ಪತ್ರ ಕೊಟ್ಟಿದ್ದೇನೆ. ಕೇರಳ ಮಾದರಿಯಲ್ಲಿ ಕುತ್ತಿಗೆ ಕಡಿದು ತಲೆಗೆ ಒಡೆದು ಕೊಲ್ಲಲಾಗಿದೆ. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಲೆ ಮಾಡುವ ರೀತಿ. ಅವರು ಸಿರಿಯಾಗೆ ಹೋಗಿ ತರಬೇತಿ ಪಡೆದು ಹತ್ಯೆ ಮಾಡ್ತಿದಾರೆ. ಗೃಹ ಸಚಿವ ಅಮಿತ್ ಶಾ ಮೌಖಿಕವಾಗಿ ತಿಳಿಸಿದ ಕಾರಣ ಎನ್ ಎಐ ಪುತ್ತೂರಿಗೆ ಬಂದಿದೆ. ಕೇರಳದ ತಲಶ್ಸೇರಿಯಲ್ಲೂ ಈಗಾಗಲೇ ಒಬ್ಬನನ್ನ ಬಂಧಿಸಲಾಗಿದೆ. ನನ್ನ ಮನೆಯ ಏಳೆಂಟು ಕಿ.ಮೀ ದೂರದಲ್ಲಿ ಘಟನೆ ನಡೆದಿದೆ ಎಂದರು.

ಇನ್ನು, ಬಂಧಿತ ಆರೋಪಿಯ ಮನೆ ನನ್ನ ಮನೆಯ ಎರಡು ಕಿ.ಮೀ ದೂರದಲ್ಲಿದೆ. ಪಿಎಫ್ ಐ ಬ್ಯಾನ್ ಮಾಡಲು ಅದಕ್ಕೆ ಬೇಕಾದ ಮಾಹಿತಿ ಬೇಕು. ಸದ್ಯ ಕೇಂದ್ರ ಸರ್ಕಾರ ಅದರ ಮಾಹಿತಿ ಸಂಗ್ರಹ ಕೆಲಸ ಮಾಡ್ತಿದೆ. ಇಂಥ ಘಟನೆಗಳಾದ ಆಕ್ರೋಶ ಸಹಜ, ಅದು ನಮಗೂ ಇದೆ. ಆದರೆ ಆಕ್ರೋಶದ ಹಿಂದೆ ನಮ್ಮ ಹುಡುಗನನ್ನ ಕಳೆದುಕೊಂಡ ನೋವಿದೆ. ಹೀಗಾಗಿ ‌ಕಾನೂನು ಮೂಲಕ ಇದರ ವಿರುದ್ದ ಹೋರಾಟ ಆಗಬೇಕಿದೆ. ಮಸೂದ್ ಹತ್ಯೆ ಷಡ್ಯಂತ್ರದ ಕೊಲೆ ಅಲ್ಲ, ಅದು ಬೇರೆ ಕೊಲೆ. ರಾಜಿ ಪಂಚಾತಿಕೆಗೆ ಕರೆದು ಕೊಲೆ ಮಾಡಲಾಗಿದೆ, ಅದು ದೇಶದ್ರೋಹದ ಜೊತೆ ಜೋಡಿಸಿಕೊಂಡಿಲ್ಲ ಎಂದು ಹೇಳಿದರು.

Exit mobile version