Site icon PowerTV

ಫಾಜಿಲ್‌ ಹಂತಕರು ಬಳಸಿದ್ದ ಕಾರ್ ಮಾಲೀಕ ವಶಕ್ಕೆ

ಮಂಗಳೂರು : ಸುರತ್ಕಲ್​ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, 90 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ.

ವಿಚಾರಣೆ ವೇಳೆ ಪೊಲೀಸರಿಗೆ ಹಂತಕರು ಮಹತ್ವದ ಸುಳಿವು ನೀಡಿದ್ದಾರೆ. ಕೃತ್ಯಕ್ಕೆ ಬಳಸಿರುವ ಕಾರಿನ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದ್ರು. ಇದೀಗ ಹತ್ಯೆಗೆ ಆರೋಪಿಗಳನ್ನ ಕರೆತಂದಿದ್ದ ಕಾರು ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜಿತ್ ಪೊಲೀಸರ ವಶದಲ್ಲಿರುವ ಕಾರು ಮಾಲೀಕ. ಜುಲೈ 28ರ ರಾತ್ರಿ ಫಾಜಿಲ್​ನ ಬರ್ಬರ ಕೊಲೆ ನಡೆದಿತ್ತು.

ಕೊಲೆ ಆರೋಪಿಗಳನ್ನ ಅಜಿತ್ ಕಾರಿನಲ್ಲಿ ಕರೆತಂದು ಹತ್ಯೆ ನಡೆದ ಬಳಿಕ ಕರೆದೊಯ್ದಿದ್ದ. ಸದ್ಯ ಮಂಗಳೂರು ಪೊಲೀಸರು ಕಾರು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version