Site icon PowerTV

ಶಿವಸೇನೆ ಸಂಸದನಿಗೆ ED ಶಾಕ್‌..!

ಮುಂಬೈ : ಶಿವಸೇನಾ ಸಂಸದ ಸಂಜಯ್‌ ರಾವುತ್‌ಗೆ ED ಶಾಕ್‌ ನೀಡಿದೆ. ಇಂದು ಬೆಳಗ್ಗೆ ED ಅಧಿಕಾರಿಗಳು ಸಂಜಯ್‌ ರಾವುತ್‌ ಅವರ ಮುಂಬೈ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಸಂಸದರ ನಿವಾಸವನ್ನು ರೇಡ್‌ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪತ್ರ ‘ಚಾಲ್’ ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಮೂರು ತಂಡಗಳು ಸಂಜಯ್‌ ರಾವುತ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಮನೆಯನ್ನು ಪರಿಶೀಲಿಸಿದೆ.

ಅಲ್ಲದೇ, ಸಂಸದರ ಮುಂಬೈ ನಿವಾಸ ಮಾಥ್ರವಲ್ಲದೆ ಇತರೆ ಹಲವು ಸ್ಥಳಗಳಲ್ಲಿ ED ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು.ಈ ಸಂಬಂಧ ಪ್ರತಿಕ್ರಿಯಿಸಿದ್ದ ಸಂಜಯ್ ರಾವುತ್, ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ರಾಜಕೀಯ ದ್ವೇಷದ ಕಾರಣ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

Exit mobile version