Site icon PowerTV

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದ ಸಂಕೇತ್ ಮಹದೇವ್

ಇಂಗ್ಲೆಂಡ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದೆ.

ಸಂಕೇತ್ ಮಹದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಗಾಯದ ನಡುವೆಯೂ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ  ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ.

ಚಿನ್ನಕ್ಕಾಗಿ ಸೆಟ್ಟೇರಿದ್ದ ಸಂಕೇತ್‌ಗೆ ಸರ್ಗರ್ ಕ್ಲೀನ್ ಮತ್ತು ಜರ್ಕ್ ಸುತ್ತಿನ 2ನೇ ಪ್ರಯತ್ನದಲ್ಲಿ ಚಿನ್ನ ಕೈತಪ್ಪಿತು. 139 ಕೆಜಿ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಬೆಳ್ಳಿ ಪದಕ ಗೆದ್ದಿದ್ದಾರೆ.

ಇನ್ನು ಮಲೇಷ್ಯಾದ ಅನಿಕ್ ಕಸ್ಡಾನ್ 249 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಪಡೆದರು. ಶ್ರೀಲಂಕಾದ ದಿಲಂಕ ಕುಮಾರ 225 ಕೆಜಿ ತೂಕದೊಂದಿಗೆ ಕಂಚಿನ ಪದಕ ಪಡೆದರು.

Exit mobile version