Site icon PowerTV

ಗೃಹ ಸಚಿವರೇ ಖಡಕ್​​​ ಆಗಿ ಕೆಲಸ ಮಾಡಿ: ಶಾಸಕ ರಾಜುಗೌಡ

ಯಾದಗಿರಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಶಿಕ್ಷಕರ ರೀತಿ ಇರಬೇಡಿ, ನೀವು ಖಡಕ್ ಆಗಿ ಕೆಲಸ ಮಾಡಿ ಎಂದು ಯಾದಗಿರಿಯಲ್ಲಿ ಬಿಜೆಪಿ ಶಾಸಕ ರಾಜುಗೌಡ ಹೇಳಿದರು.

ಗೃಹ ಸಚಿವರ ಮನೆಗೆ ಎಬಿವಿಪಿ ಮುತ್ತಿಗೆ ಹಿನ್ನಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಿಮಗೆ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿದ್ದಾರೆ. ಉತ್ತಮ ಅಧಿಕಾರಿಗಳನ್ನ ಬಳಸಿ ಹಂತಕರ ಹೆಡೆಮುರಿ ಕಟ್ಟಿ. ಸ್ಕೂಲ್ ಮಕ್ಕಳಿಗೆ ಮಾಸ್ಟರ್​ ರೀತಿ ಬುದ್ಧಿ ಹೇಳಬೇಡಿ ಎಂದು ಸಲಹೆ ನೀಡಿದರು.

ಇನ್ನು ಇವರಿಗೆಲ್ಲಾ ಹೈದ್ರಾಬಾದ್ ಸಜ್ಜನ್ ಮಾದರಿಯಲ್ಲಿ ಶೂಟ್ ಔಟ್ ಮಾಡಿ ಬಿಸಾಕಬೇಕು. ಕ್ರಿಮಿನಲ್ಸ್​ಗೆ ಇನ್ಸ್​​ಪೆಕ್ಟರ್​ ಭಾಷೆಯಲ್ಲಿ ಉತ್ತರಿಸಬೇಕು. ಕ್ರಿಮಿನಲ್ಸ್​ಗೆ ಸ್ಮೂತ್​ ಆಗಿ ಮಾತನಾಡಿದರೆ ಕೆಲಸ ಆಗಲ್ಲ. ಅವರಿಗೆಲ್ಲಾ ಇನ್ಸ್​​ಪೆಕ್ಟರ್​ ಭಾಷೆಯಲ್ಲಿ ಖಡಕ್ ಆಗಿ ಉತ್ತರಿಸಬೇಕು ಎಂದು ಶಾಸಕ ರಾಜುಗೌಡ ಹೇಳಿದರು.

Exit mobile version