Site icon PowerTV

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇಂದು ವಿಧಾನಸೌಧದಲ್ಲಿ ವಿಚಾರಣೆ ನಡೆಸಲಿದ್ದಾರೆ.

ಮೈಸೂರು ಡಿಸಿ ಆಗಿದ್ದಾಗ ನಡೆಸಿದ ಹಲವು ಅಕ್ರಮಗಳ ತನಿಖೆ ವಿಚಾರವಾಗಿ ಇಂದು ಬೆಳಗ್ಗೆ 11ಕ್ಕೆ ಹಾಜರಾಗಿ ವಿವರಣೆ ನೀಡಲು ಸೂಚಿಸಲಾಗಿದೆ. ಈ ಸಂಬಂಧ ರೋಹಿಣಿ ಸಿಂಧೂರಿಗೆ ವಸತಿ ಇಲಾಖೆ ಪತ್ರ ನೀಡಿದ್ದು, ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್ ತನಿಖೆ ಮಾಡಲಿದ್ದಾರೆ.

ಇನ್ನು, ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿಯುಕ್ತಿಗೊಂಡಿರುವ ರವಿಶಂಕರ್ ವಿವರಣೆಗೆ ಹಾಜರಾಗುವಂತೆ ನೀಡಿರುವ ಪತ್ರ ಪವರ್ ಟಿವಿಗೆ ಲಭ್ಯವಾಗಿದೆ. ಇನ್ನು, 13ರೂ. ಬಟ್ಟೆ ಬ್ಯಾಗ್‌ 52 ರೂ.ಗಳಿಗೆ ಖರೀದಿ ಮಾಡಿದ್ದು, ಡಿಸಿ ನಿವಾಸದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ. ಪಾರಂಪರಿಕ ಮಾರ್ಗಸೂಚಿ ಉಲ್ಲಂಘಿಸಿ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ. ಕೋವಿಡ್‌ನಿಂದ 969 ಮಂದಿ ಮೃತಪಟ್ಟರೂ 238 ಎಂದು ತಪ್ಪು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಇಂದು ತನಿಖೆ ಮಾಡಲಿದ್ದಾರೆ.

Exit mobile version