Site icon PowerTV

ರಾಜೀನಾಮೆ ಕೊಟ್ಟ ತಕ್ಷಣ ಪಕ್ಷ ಮುಳಗಲ್ಲ: ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.ಇದಕ್ಕೆ ಸಂಸದ ಜಿಎಂ ಸಿದ್ದೇಶ್ವರ ಅವರು ಉಡಾಫೆಯ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 11 ಕೋಟಿ ಕಾರ್ಯಕರ್ತರನ್ನ ಹೊಂದಿರುವ ಪಕ್ಷ. ಅವರ್ಯಾರು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕೆಲವರು ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ ಎಂದು ಅಸಂಬದ್ಧ ಮಾತುಗಳನ್ನಾಡಿದ್ದಾರೆ.

ಇನ್ನು ಟಿವಿಯಲ್ಲಿ ಬರುವ ಉದ್ದೇಶಕ್ಕಾಗಿ ಆ ರೀತಿ ಮಾಡ್ತಾರೆ ಎಂದು ತಮ್ಮದೇ ಪಕ್ಷದ ಕಾರ್ಯಕರ್ತರ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದರು. ತಮ್ಮ ಸರ್ಕಾರದ ವೈಫಲ್ಯದಿಂದ ನೂರಾರು ಕಾರ್ಯಕರ್ತರು ರಾಜೀನಾಮೆ ನೀಡಿದರು ಸಹ ಬುದ್ದಿ ಕಲಿಯದ ಸಂಸದರು ಯಾರು ಬಿಟ್ಟು ಹೋದರು ಪಕ್ಷ ಇರುತ್ತೆ ಅನ್ನೋ ದಾಟಿಯಲ್ಲಿ ಉಡಾಫೆಯಾಗಿ ಮಾತನಾಡಿದ್ದಾರೆ.

Exit mobile version