Site icon PowerTV

‘ಯುವಕರನ್ನು ಬಿಜೆಪಿ ಗುಲಾಮರನ್ನಾಗಿ ಮಾಡ್ತಿದೆ’ : ಹೆಚ್​ಡಿಕೆ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಬೆನ್ನಲ್ಲೇ ಫಾಜಿಲ್‌ ಕೊಲೆ ನಡೆದಿದೆ. ರಾಜ್ಯದಲ್ಲಿ ಸರಣಿ ಕೊಲೆ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಾತನಾಡಿ ಕೊಲೆಯಾದ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರವೀಣ್‌ ಕೊಲೆ ಕೇಸ್‌ ಎನ್‌ಐಎಗೆ ಕೊಡುವುದಾಗಿ ಹೇಳಿದ್ದಾರೆ ಈವರೆಗೆ ಎನ್‌ಐಎಗೆ ಕೊಟ್ಟಿರುವ ಕೇಸ್‌ ಏನಾಗಿದೆ ಅಂತಾ ಗೊತ್ತಿಲ್ಲ. ಎನ್‌ಐಎಗೆ ನೀಡಿ 5-6 ವರ್ಷ ಕಳೆದರೂ ಏನಾಗಿದೆ ಅಂತಾ ಗೊತ್ತಿಲ್ಲ. ಪ್ರವೀಣ್‌ ಕೊಲೆ ತನಿಖೆ ರಾಜ್ಯದ ಅಧಿಕಾರಿಗಳಿಗೆ ಕೊಡಿ. ಹಿಂದುತ್ವದ ಹೆಸರಲ್ಲಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಯುವಕರನ್ನು ಬಿಜೆಪಿ ನಾಯಕರು ಗುಲಾಮರನ್ನಾಗಿ ಮಾಡ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕೊಲೆ ನಡೆಯಲಿಲ್ಲ, ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಯಾಗ್ತಿದೆ ಎಂದು ಹೆಚ್ಚಿಕೆ ಪ್ರಶ್ನಿಸಿದ್ದಾರೆ

Exit mobile version