Site icon PowerTV

21 ಶಂಕಿತರು ಪೊಲೀಸರ ವಶಕ್ಕೆ

ಮಂಗಳೂರು : ಫಾಜಿಲ್​ ಹತ್ಯೆ ಪ್ರಕರಣ ಹಿನ್ನೆಲೆ ಕರಾವಳಿ ಕೋಮು ಕಿಚ್ಚಿಗೆ ಯುವಕ ಫಾಜಿಲ್ ಬಲಿಯಾದ್ನಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಫಾಜಿಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಫಾಜಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರನ್ನ ನಿನ್ನೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ 21 ಶಂಕಿತರ ಪೈಕಿ ಹತ್ಯೆಯಲ್ಲಿ 6 ಜನರ ಪಾತ್ರ ಇರುವುದು ದೃಢಪಟ್ಟಿರುವ ಹಿನ್ನೆಲೆ ಬಂಧಿಸಲು ಮಂಗಳೂರು ಪೊಲೀಸರ ಸಿದ್ಧತೆ ನಡೆಸಿದ್ದು, ಈ ಕುರಿತು ಸಂಜೆಯೊಳಗೆ ಪೊಲೀಸರು ದೃಢಪಡಿಸಲಿದ್ದಾರೆ.

ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕೆಲವರನ್ನ ವಶಕ್ಕೆ ಪಡೆಯಲಾಗಿದೆ. ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದೆ. ಸುರತ್ಕಲ್​​ನ ಗಣೇಶಪುರದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

Exit mobile version