Site icon PowerTV

ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ : ರೈತರು ಕಂಗಾಲು

ಚಾಮರಾಜನಗರ : ಗಗನಕ್ಕೇರಿದ್ದ ಟೊಮ್ಯಾಟೊ ಬೆಲೆ ಈಗ ಪಾತಳಕ್ಕೆ ಕುಸಿದಿದ್ದು ರೈತರು ಕಂಗಲಾಗಿದ್ದಾರೆ, ಸಾಗಾಟ ವೆಚ್ಚವೂ ಬರದಂತ ಸ್ಥಿತಿಯಲ್ಲಿ ಮಾರುಕಟ್ಟೆ ದರ ಸಿಗುತ್ತಿರುವ ಹಿನ್ನೆಲೆ ಚಾರಾಜನಗರ ಜಿಲ್ಲೆಯಲ್ಲಿ ರೈತರು ಪರದಾಡುವಂತಾಗಿದೆ.

ಜಿಲ್ಲೆಯ ಎಪಿಎಂಸಿಗಳಲ್ಲಿ ಟೊಮೊಟೊ ಬೆಲೆ ಕೆ.ಜಿಗೆ 3 ರಿಂದ 4 ರೂ.ಗೆ ಕುಸಿದಿರುವ ಹಿನ್ನೆಲೆ ಟೊಮೊಟೋ ಬೆಳೆದ ರೈತರು ಮಾರುಕಟ್ಟೆ ಪ್ರಾಂಗಣದಲ್ಲೆ ಸುರಿದು ಹೋಗುತ್ತಿದ್ದಾರೆ.

ಕಳೆದ 20 ದಿನದಿಂದಲೂ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಹಾಗು ಅಧಿಕ ಮಂದಿ ರೈತರು ಒಮ್ಮಲೆ ಮಾರುಕಟ್ಟೆಗೆ ಟೊಮೊಟೋ ತಂದ ಹಿನ್ನೆಲೆ ಬೆಲೆ ಕಳೆದ ಎರಡು ದಿನದಿಂದ 3 ರೂ.ಗೆ ಕುಸಿದಿದೆ. ಇದರಿಂದ ರೈತ ಬೆಳೆಗೆ ಹಾಕಿದ ಬಂಡವಾಳ ಸಿಗದಂತಾಗಿದ್ದು, ಕಷ್ಟಪಟ್ಟು ಟೊಮೊಟೋ ಬೆಳೆದ ರೈತ ಸಾಲದ ಸುಳಿಗೆ ಸಿಲುಕಿ ಕೊಳ್ಳುತ್ತಿದ್ದಾನೆ.

ಮಾರುಕಟ್ಟೆಗೆ ದೂರದ ಊರುಗಳಿಂದ ರೈತರು ಆಟೋವನ್ನು ಬಾಡಿಗೆಗೆ ಹಿಡಿದು ಟೊಮೆಟೊ ತಂದರೇ ಸಿಗುತ್ತಿರುವ ಬೆಲೆ ಆಟೋ ಬಾಡಿಗೆಗೂ ಸಿಗದಂತಾಗಿದೆ. ಅನೇಕ ಮಂದಿ ತಮ್ಮ‌ ಜೇಬಿನಿಂದಲೇ ಆಟೋಗೆ ಬಾಡಿಗೆ ತೆತ್ತು ಟೊಮೆಟೊ ಮಾರದೇ ಸುರಿದು ಪೆಚ್ಚುಮೋರೆ ಹಾಕಿಕೊಂಡು ಹೋಗುತ್ತಿದ್ದಾರೆ.‌

Exit mobile version